ಹಾಸನ ಚುನಾವಣೆಗೆ ಸ್ಯಾಂಡಲ್ ವುಡ್ ಮೆರಗು : JDS ಅಭ್ಯರ್ಥಿ ಪರವಾಗಿ ಯಶ್ ಪ್ರಚಾರ

ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇದೀಗ ಸ್ಯಾಂಡಲ್ ವುಡ್ ನಂಟು ಬೆಸೆಯತೊಡಗಿದೆ. ಈ ತನಕ ಸ್ಟಾರ್ ಪ್ರಚಾರಕರಿಲ್ಲದೆ ಬಣಗುಡುತ್ತಿದ್ದ ಜೆಡಿಎಸ್ ಚುನಾವಣಾ ಅಖಾಡ ಇದೀಗ ಹೀರೋ ಎಂಟ್ರಿಯಿಂದ ರಂಗೇರತೊಡಗಿದೆ. ಸ್ಯಾಂಡಲ್ವುಡ್ ರಾಮಾಚಾರಿ ಯಶ್, ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಜೆಡಿಎಸ್ ಕೋಟೆಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಕಾಶ್ ಪರ ಸ್ಯಾಂಡಲ್ ವುಡ್ ರಾಮಚಾರಿಯಾಗಿರೋ ಯಶ್ ಗುರುವಾರ ಪ್ರಚಾರ ನಡೆಸಿದರು. ನಗರದ ಹೇಮಾವತಿ ಪ್ರತಿಮೆಯ ಬಳಿಯಿಂದ ಜೆಡಿಎಸ್ ಚುನಾವಣಾ ಪ್ರಚಾರದ ತೆರೆದ ವಾಹನವನ್ನ ಏರಿದ ರಾಮಚಾರಿ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದರು.

ಈ ವೇಳೆ ಜೆಡಿಎಸ್ ನ ಹಾಲಿ ಶಾಸಕ ಹಾಗೂ ಅಭ್ಯರ್ಥಿಯಾಗಿ ಅಖಾಡದಲ್ಲಿರುವ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷ ಅನಿಲ್, ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು. ಬಳಿಕ ಎನ್.ಆರ್.ವೃತ್ತದಲ್ಲಿ ಆಗಮಿಸುತ್ತಿದ್ದಂತೆ ಸ್ಯಾಂಡಲ್ ವುಡ್ ರಾಮಾಚಾರಿ ನೋಡಲು ಜನಸಾಗರವೇ ಮುಗಿಬಿದ್ದಿತ್ತು.

Leave a Reply

Your email address will not be published.