“ಈ ಸಲ ಕಪ್‌ ನಮ್ದೇ” : ಪಂಚಿಂಗ್ ಡೈಲಾಗ್‌ ಹೊಡೆದ H.D ಕುಮಾರಸ್ವಾಮಿ

ವಿಜಯಪುರ : ಈ ಸಲ ಕಪ್‌ ನಮ್ದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, 50-50 ಎನ್ನುವ ಮಾತೆ ಇಲ್ಲ. ಈ ಸಲ ಕಪ್‌ ಜೆಡಿಎಸ್ ಪಾಲಾಗೋದು ಗ್ಯಾರಂಟಿ ಎಂದಿದ್ದಾರೆ.

ಹೆಚ್ಡಿಕೆ ಅವಕಾಶವಾದಿ ಎನ್ನುವ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಓರ್ವ ಜಾತಿವಾದಿ.. ಕುರುಬರ ಓಟುಗಳನ್ನ ಪಡೆಯೋಕೆ ಬಾದಾಮಿಗೆ ಅರ್ಜಿ ಹಾಕಿದ್ದಾರೆ. ಸಿಎಂ ಸಂಕುಚಿತ ಮನೋಭಾವದ ವ್ಯಕ್ತಿ.ಸಿದ್ದರಾಮಯ್ಯರಿಂದ ನಾನು ಪಾಠ ಕಲೆಯಬೇಕಿಲ್ಲ.ಸಿಎಂ ಸಿದ್ದರಾಮಯ್ಯ ಜೆಡಿಎಸ್ ನ ಮುಸ್ಲಿಂ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷವನ್ನ ತಳಕು ಹಾಕುವ ಮೂಲಕ ಮುಸ್ಲಿಂ ಮತಗಳನ್ನ ಒಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಓರ್ವ ಶುದ್ಧ ಸುಳ್ಳು ಬುರುಕ.ಸಿಎಂ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

ಇದೇ ವೇಳೆ ಕಾವೇರಿ ತೀರ್ಪು ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ತೀರ್ಪಿನ ಬಗ್ಗೆ ನಾನು ಚರ್ಚೆ ಮಾಡಲು ಹೋಗೋದಿಲ್ಲ.ಕಾವೇರಿ ವಿವಾದಇನ್ನು ಬಗೆ ಹರಿದಿಲ್ಲ. ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ತಾವೇ ಏನೊ ಸಾಧನೆ ಮಾಡಿದಂತೆ ಹೇಳಿಕೊಳ್ತಿತ್ತು. ಆದರೆ ಈಗ ನೋಡಿ ಏನಾಗಿದೆ ಎಂದು.  ಕಾವೇರಿ ಹೋರಾಟ ಮುಂದುವರೆಸುತ್ತೇವೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಹೋರಾಟ ಕೈ ಬಿಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.

 

Leave a Reply

Your email address will not be published.