ಕಮಲ ಬಿಟ್ಟು”ಕೈ” ಹಿಡಿದ ಸೊಗಡು ಶಿವಣ್ಣ ಬೆಂಬಲಿಗರು : ಬಿಜೆಪಿಯಲ್ಲಿ ಶುರುವಾಯ್ತು ತಳಮಳ

ತುಮಕೂರು : ಟಿಕೆಟ್ ಸಿಗದಿದ್ದಕ್ಕೆ ಸಿಡಿದೆದ್ದಿರುವ ಸೊಗಡು ಶಿವಣ್ಣ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಗೆ ಟಾಂಗ್ ನೀಡಿದ್ದಾರೆ.

ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದ ಎದುರು ಸೊಗಡು ಶಿವಣ್ಣ‌ ಬೆಂಬಲಿಗರಾದ ಪಂಚಾಕ್ಷರಯ್ಯ ಹಾಗೂ ಆಟೋ ನವೀನ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ರಫೀಕ್ ಅಹಮದ್ ಗೆಲುವಿಗೆ ಮುಂದಾಗಿದ್ದಾರೆ. ನಿನ್ನೆಯಷ್ಟೇ ಸೊಗಡು ಶಿವಣ್ಣ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ರಫೀಕ್ ಅಹಮದ್ ಹೇಳಿದ್ದರು, ಈ ಬೆನ್ನಲ್ಲೇ ಇಂದು ಸೊಗಡು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅಲ್ಲದೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಮತ್ತಷ್ಟು ಕಂಪನ ಉಂಟು ಮಾಡಿದೆ.

One thought on “ಕಮಲ ಬಿಟ್ಟು”ಕೈ” ಹಿಡಿದ ಸೊಗಡು ಶಿವಣ್ಣ ಬೆಂಬಲಿಗರು : ಬಿಜೆಪಿಯಲ್ಲಿ ಶುರುವಾಯ್ತು ತಳಮಳ

  • May 3, 2018 at 3:26 PM
    Permalink

    This is the fake news yesterday oly shivannaji clarify this he is always support to Bajapa
    Hi

    Reply

Leave a Reply

Your email address will not be published.

Social Media Auto Publish Powered By : XYZScripts.com