ಉ.ಪ್ರ.ದಲ್ಲಿ ಜಿಹಾದಿಗಳನ್ನು ಹತ್ತಿಕ್ಕಿದಂತೆ, ಇಲ್ಲಿಯೂ ಮಾಡಬೇಕು, ಅದಕ್ಕೆ BJP ಸರ್ಕಾರ ಬರಬೇಕು : ಯೋಗಿ

ಶಿರಸಿ : ಉತ್ತರ‌ ಕನ್ನಡ ಜಿಲ್ಲೆ ಶಿರಸಿ ನಗರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಭೇಟಿ ನೀಡಿದ್ದಾರೆ. ನಗರದ ವಿಕಾಸಾಶ್ರಮದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಯೋಗಿ ಸಾರ್ವಜನಿಕರನ್ನ ಉದ್ದೇಶಿಸಿ ಭಾಷಣ ಮಾಡಿದರು.

ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ‌ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ಕೈಗೊಂಡ ಯೋಗಿ, ಇನ್ನು ಕರ್ನಾಟಕ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿ‌ ಕಾರಿದರು. ಕರ್ನಾಟಕ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದೆಗೆಟ್ಟಿದೆ. ಅದೇ ಉತ್ತರ ಪ್ರದೇಶದಲ್ಲಿ ಕಾನೂನು ನಮ್ಮ ಹಿಡಿತದಲ್ಲಿದೆ. ರಾಜ್ಯದಲ್ಲಿ ಹಿಂದೂ ಯುವಕರ ಹತ್ಯೆ ಆಗ್ತಾ ಇದೆ. ಆದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಯಾವ ರೀತಿ ಇರತ್ತೋ ಹಾಗೆಯೇ ಅಲ್ಲಿನ ವ್ಯವಸ್ಥೆ ಇರುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ದಿಯಲ್ಲಿ ವಿಫಲಗೊಂಡಿದೆ. ಕಾಂಗ್ರೆಸ್ ಸರ್ಕಾರ ಜಿಹಾದಿಗಳನ್ನ ಬೆಳೆಸುವ ಪ್ರಯತ್ನ‌ ಮಾಡುತ್ತಿದೆ. ಆದ್ರೆ ಉ.ಪ್ರ ದಲ್ಲಿ ಜಿಹಾದಿಗಳನ್ನ ನಾವು ಹತ್ತಿಕ್ಕಿದ್ದೇವೆ. ರಾಜ್ಯದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ನ್ಯಾಯ ಕೊಡಿಸೋ ಕೆಲಸ ರಾಜ್ಯ ಸರ್ಕಾರ ಕಾಂಗ್ರೆಸ್ ಮಾಡಿಲ್ಲ. ರೈತರ ಬಗ್ಗೆ ಕಾಳಜಿ ಇರದ ಸರ್ಕಾರ ಅಂದ್ರೆ ಅದೇ ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿ ವ್ಯವಸ್ಥೆ ವಿಕಾಸದೆಡೆ ಹೋಗಬೇಕಿದೆ. ಅದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಳ್ವಿಕೆಗೆ ಬರಬೇಕಿದೆ. ಈ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರಕ್ಕೆ ಪಣ ತೊಡಬೇಕಿದೆ. ಕಾಂಗ್ರೆಸ್ ಸರ್ಕಾರ ಜಾತಿ, ಧರ್ಮ ವಿಭಜನೆ ಮಾಡಿ ಸರ್ಕಾರ ನಡೆಸುತ್ತಿದೆ. ಇದನ್ನ ತೊಲಗಿಸಲು ಬಿಜೆಪಿ ಸರ್ಕಾದೊಂದಿಗೆ ಕೈ ಜೋಡಿಸಬೇಕಿದೆ ಎಂದು ಜನರಿಗೆ ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com