ಪ್ರಚಾರದ ಕಣಕ್ಕಿಳಿದ ಮಾಜಿ ಸಂಸದೆ ತಾಯಿ : ರಮ್ಯಾ ಪ್ರಚಾರಕ್ಕೆ ಬರೋದ್ರ ಬಗ್ಗೆ ರಂಜಿತಾ ಹೇಳಿದ್ದೇನು?

ಮದ್ದೂರು : ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿದಿದ್ದಾರೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯನ್ನು ತಲುಪಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಏಳು ಅಭ್ಯರ್ಥಿಗಳೂ ಗೆಲ್ಲುವ ಭರವಸೆ ಇದೆ. ಸಿದ್ದರಾಮಯ್ಯ ಅವರ ಕಾಂಟ್ರಿಬ್ಯೂಷನ್‌ನಿಂದ  ಜನ ನಮಗೆ ಆಶಿರ್ವಾದ ಮಾಡುತ್ತಾರೆ. ಏಳು ತಾಲ್ಲೂಕಿನಲ್ಲೂ ರಮ್ಯಾ ಯಾವಾಗ ಪ್ರಚಾರಕ್ಕೆ ಬರ್ತಾರೆ ಅಂತಾ ಕೇಳ್ತಿದ್ದಾರೆ. ರಮ್ಯಾ ಯಾವಾಗ ಪ್ರಚಾರಕ್ಕೆ ಬರ್ತಾರೋ ನನಗೂ ಗೊತ್ತಿಲ್ಲ ಎಂದಿದ್ದಾರೆ.

ಕಾವೇರಿ ತೀರ್ಪಿಗೆ ಸಂಬಂಧಿಸಿದಂತೆ ಸಿ ಎಂ ಒಳ್ಳೆ ನಿರ್ಧಾರ ಕೈಗೊಳ್ಳೊ ಭರವಸೆಯಿದೆ ಎಂದಿರುವ ರಂಜಿತಾ, ರೈತರಿಗೆ ಕುಡಿಯಲು ಹಾಗೂ ಬೆಳೆ ಬೆಳೆಯಲು ನೀರಿಲ್ಲದೆ ಸಂಕಷ್ಟಪಡ್ತಿದ್ದಾರೆ. ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ಸಿ ಎಂ ಜೊತೆ ಚರ್ಚೆ ನಡೆಸಿ ಒಳ್ಳೆ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋ ನಂಬಿಕೆಯಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com