ಮೋದಿ ಬಗ್ಗೆ ಮಾತಾಡಿದ್ರೆ ಸುಮ್ನಿರಲ್ಲ, ಆಡಳಿತ ನಡೆಸೋ ಕಷ್ಟ ನಿಂಗೇನ್ ಗೊತ್ತು : ಪ್ರಕಾಶ್ ರೈ ವಿರುದ್ಧ ವೆಂಕಟ್‌ ಗರಂ

ಕೊಡಗು : ಪ್ರಕಾಶ್ ರೈ ವಿರುದ್ಧ ಫೈರಿಂಗ್ ಸ್ಟಾರ್ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.  ಪ್ರಕಾಶ್ ರೈಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ. ಹೀಗಾಗಿ ಪ್ರಧಾನಿ ಮೋದಿ ವಿರುದ್ಧ ಮಾತಾಡ್ತಾನೆ.  ಸಿನೆಮಾ ಡೈಲಾಗ್ ಹೊಡೆಯೋದು ಸುಲಭ. ಬೇರೆಯವ್ರು ಡೈಲಾಗ್ ಬರೆದು ಕೊಟ್ಟಿರ್ತಾರೆ. ಅದನ್ನೇ ಇಲ್ಲಿ ಊದುತ್ತಾನೆ.  ದೇಶದ ಆಡಳಿತ ನಡೆಸುವ ಕಷ್ಟ ಪ್ರಧಾನಿಗೆ ಗೊತ್ತು ಎಂದಿದ್ದಾರೆ.

ಪ್ರಕಾಶ್ ರೈಗೆ ಈಗ ಮಾಡೋಕೆ ಸಿನೆಮಾ ಇಲ್ಲ ಅನ್ಸುತ್ತೆ.  ಶ್ರಮಪಡುವ ವ್ಯಕ್ತಿಯನ್ನು ಯಾರೂ ತುಳಿಯಬಾರದು.ಮೋದಿ ಬಗ್ಗೆ ಮಾತಾಡುವ ಯೋಗ, ಯೋಗ್ಯತೆ ಪ್ರಕಾಶ್ ರೈಗೆ ಇಲ್ಲ.  ಪ್ರಕಾಶ್ ರೈ ಮೊದಲು ದೇಶದ ಜನರನ್ನು ಪ್ರೀತ್ಸೋದಕ್ಕೆ  ಕಲಿಯಲಿ.
ನೀನು ಎಷ್ಟು ಜನರಿಗೆ ಸಹಾಯ ಮಾಡಿದ್ದಿಯಾ? ನಾನು ಎಷ್ಟು ಜನರಿಗೆ ಸಹಾಯ ಮಾಡಿದ್ದೇನೆ ಅನ್ನೋದನ್ನ ತೋರಿಸ್ತೇನೆ.
ನೀನು ತೋರಿಸ್ತೀಯಾ?ಎಂದು  ಪ್ರಕಾಶ್ ರೈಗೆ ವೆಂಕಟ್ ಸವಾಲು ಹಾಕಿದ್ದಾರೆ.
ಪ್ರಚಾರದಲ್ಲಿದ್ರೆ ಸಿನೆಮಾದಲ್ಲಿ ಹೆಚ್ಚು ಅವಕಾಶ ಸಿಗ್ಬೋದು ಅಂತ ಮೋದಿನ ಬೈತಿದ್ದಾನೆ.  ಸಿನೆಮಾದಲ್ಲಿ ವಿಲನ್ ಆಗಿದ್ದೀಯಾ, ಲೈಫಲ್ಲಿ ಆಗ್ಬೇಡ.ನಾಯಿ ಕೂಡಾ ಬೊಗಳುತ್ತೆ. ಆದ್ರೆ ಅದು ನಿಯತ್ತಿಂದ ಕಾವಲು ಕಾಯುತ್ತೆ. ಮೊದಲು ಪ್ರಧಾನಿಯ ಮೌಲ್ಯವನ್ನು ತಿಳಿಯಲಿ. ರಾಜ್ಯದಲ್ಲಿ ಪ್ರಕಾಶ್ ಹೊಡಿತಿರುವ ಡೈಲಾಗ್ ವರ್ಕೌಟ್ ಆಗ್ತಿಲ್ಲ. ಬೇರೆಯವ್ರ ಡೈಲಾಗ್‍ನ ಹೇಳಲಿ. ಮೋದಿ ಬಗ್ಗೆ ಮಾತಾಡಿದ್ರೆ ಜನ ಸುಮ್ನಿರೋದಿಲ್ಲ. ಟ್ವಿಟ್ಟರ್, ಫೇಸ್ಬುಕಲ್ಲಿ ಕಮೆಂಟ್ ಮಾಡುವಾಗ ಹೆಲ್ಮೆಟ್ ಹಾಕೋ ಎಂದು ವೆಂಕಟ್ ಸಲಹೆ ನೀಡಿದ್ದಾರೆ.
ಇದೇ ವೇಳೆ ಮದುವೆ ಕುರಿತು ಪ್ರತಿಕ್ರಿಯಿಸಿರುವ ವೆಂಕಟ್‌, ಶೀಘ್ರದಲ್ಲೇ ನಾನು ಮದುವೆಯಾಗ್ತಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ಮದುವೆ ಆಗ್ಬೇಕು ಅಂದುಕೊಂಡಿದ್ದೇನೆ.ಈಗ ನನಗೆ ಜವಾಬ್ದಾರಿ ಬಂದಿದೆ.ಹುಡುಗಿ ಇನ್ನು ನೋಡ್ಬೇಕಷ್ಟೆ.ಯಾರ್ನಾದ್ರು ಒಬ್ರನ್ನ ಆಗ್ತೇನೆ. ಸಿನೆಮಾದವ್ರನ್ನ, ರಾಜಕೀಯದವ್ರನ್ನ ನಾನು ಮದುವೆಗೆ ಕರೆಯಲ್ಲ. ಅಂಬರೀಷ್, ಸಿದ್ರಾಮಯ್ಯ, ಯಡಿಯೂರಪ್ಪನ ಕರೆಯುತ್ತೇನೆ.ನಾನು ಕಾಲೇಜಲ್ಲಿದ್ದಾಗ ಕೊಡಗಿನ ಹುಡುಗಿಯನ್ನು ಪ್ರೀತಿದಿದ್ದೆ.ಅವ್ರನ್ನ ನೋಡೋಕೆ ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗ್ತಿದ್ದೆ. ಹೀಗಾಗಿ ಮಡಿಕೇರಿ ನನ್ನ ಫೇವರಿಟ್. ಲವ್ ಮಾಡಿದ್ದೆಲ್ಲ ಈಗ ಹಳೇ ವಿಚಾರ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com