ತಮಿಳುನಾಡಿಗೆ ಕೂಡಲೆ 4 ಟಿಎಂಸಿ ನೀರು ಬಿಡಿ : ರಾಜ್ಯಕ್ಕೆ ಸುಪ್ರೀಂ ಆದೇಶ

ದೆಹಲಿ :  ಚುನಾವಣೆಯ ಹೊತ್ತಲ್ಲೇ ಕಾವೇರಿ ಕಾವೂ ಹೆಚ್ಚಾಗತೊಡಗಿದೆ.  ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿಂದು ವಿಚಾರಣೆ ನಡೆದಿದ್ದು, 4 ಟಿಎಂಸಿ ನೀರನ್ನು ಕೂಡಲೆ ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಆದೇಶಿಸಿದೆ.
ಕಾವೇರಿ ವಿವಾದ ಸಂಬಂಧ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅ ರ್ಜಿ ಸಲ್ಲಿಸಿತ್ತು. ಈ  ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌  ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಕೂಡಲೆ 4 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿದ್ದಾರೆ.
 ಜೊತೆಗೆ ಈ ವಿಚಾರ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದ್ದು ಮೇ 8ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com