IPL : ರಾಯಲ್ಸ್ ವಿರುದ್ಧ ಡೆಲ್ಲಿಗೆ 4 ರನ್ ರೋಚಕ ಜಯ : ಮಿಂಚಿದ ಪಂತ್, ಶ್ರೇಯಸ್

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಬುಧವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ 4 ರನ್ ರೋಚಕ ಜಯಗಳಿಸಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ಡೆಲ್ಲಿಗೆ ಇದು ಮೂರನೇ ಗೆಲುವಾಗಿದೆ.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಉಭಯ ತಂಡಗಳಿಗೆ ತಲಾ 18 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲ ಬ್ಯಾಟ್ ಮಾಡಿದ ಡೆಲ್ಲಿ 17.1 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಡೆಲ್ಲಿ ತಂಡದ ರಿಷಭ್ ಪಂತ್ 69, ನಾಯಕ ಶ್ರೇಯಸ್ ಅಯ್ಯರ್ 50 ಪೃಥ್ವಿ ಶಾ 47 ರನ್ ಬಾರಿಸಿದರು.

ಮತ್ತೆ ಮಳೆ ಅಡ್ಡಿ ಪಡಿಸಿದ್ದರಿಂದ ರಾಯಲ್ಸ್ ತಂಡಕ್ಕೆ ಗೆಲುವಿಗೆ 12 ಓವರುಗಳಲ್ಲಿ 151 ರನ್ ಟಾರ್ಗೆಟ್ ನೀಡಲಾಯಿತು. 12 ಓವರ್ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದ ರಾಜಸ್ಥಾನ ಕೇವಲ 4 ರನ್ ಅಂತರದಿಂದ ವೀರೋಚಿತ ಸೋಲು ಅನುಭವಿಸಿತು. ರಾಯಲ್ಸ್ ಪರವಾಗಿ ಆರಂಭಿಕ ಬ್ಯಾಟ್ಸಮನ್ ಗಳಾದ ಜೋಸ್ ಬಟ್ಲರ್ 67 ಹಾಗೂ ಡಿ ಆರ್ಸಿ ಶಾರ್ಟ್ 44 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com