CSK ಟ್ವಿಟರ್ ಹ್ಯಾಂಡಲ್‍ನಿಂದ ಸಚಿನ್‍ಗೆ ಅವಮಾನ.? : ಫ್ಯಾನ್ಸ್ ಆಕ್ರೋಶಕ್ಕೆ ಕಾರಣವೇನು.?

ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಎರಡು ವರ್ಷಗಳ ನಂತರ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಸಚಿನ್ ಬಗ್ಗೆ ಟ್ವೀಟ್ ಮಾಡಿರುವ ಚೆನ್ನೈ ತಂಡದ ಟ್ವಿಟರ್ ಹ್ಯಾಂಡಲ್ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಎಡಗೈ ಬ್ಯಾಟ್ಸಮನ್ ಸುರೇಶ್ ರೈನಾ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಟ್ಟಾಗಿ ಮೆಟ್ಟಿಲುಗಳನ್ನು ಏರುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿದೆ. ಅಷ್ಟೇ ಆಗಿದ್ದರೆ ಏನೂ ತೊಂದರೆಯಿರಲಿಲ್ಲ, ಆದರೆ ಅದಕ್ಕೆ  ‘ಸುರೇಶ್ ಹಾಗೂ ರಮೇಶ್’ ಎಂದು ಅಡಿಬರಹವನ್ನು ನೀಡಿದೆ.

ಸಚಿನ್ ಅವರ ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್ ಎಂಬುದನ್ನು ಹಿನ್ನೆಲೆಯಾಗಿಟ್ಟುಕೊಂಡು ‘ರಮೇಶ್ ಹಾಗೂ ಸುರೇಶ್’ ಎಂದು ತಮಾಷೆಯಾಗಿ ಬರೆಯಲಾಗಿದೆ. ರಮೇಶ್ ಎಂಬುದು ಸಚಿನ್ ತೆಂಡೂಲ್ಕರ್ ತಂದೆಯವರ ಹೆಸರಾಗಿದೆ. ಸಚಿನ್ ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಪಾತ್ರ ವಹಸಿದ ಅವರ ತಂದೆಯ ಹೆಸರನ್ನು ಬಳಸಿಕೊಂಡು ಹೀಗೆ ಜೋಕ್ ಮಾಡಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

CSK ಟ್ವಿಟರ್ ಹ್ಯಾಂಡಲ್ ವಿರುದ್ಧ ಕಿಡಿಕಾರಿರುವ ಅಭಿಮಾನಿಗಳು ಕೂಡಲೇ ಟ್ವೀಟನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.

Image result for CSK sachin raina tweet

Leave a Reply

Your email address will not be published.

Social Media Auto Publish Powered By : XYZScripts.com