ಬಿಜೆಪಿ ದಲಿತರನ್ನು ರಾಷ್ಟ್ರಪತಿಯನ್ನಾಗಿಸಿದೆ, ಟೀ ಮಾರುವವನನ್ನು ಪ್ರಧಾನಿಯನ್ನಾಗಿಸಿದೆ, ಕಾಂಗ್ರೆಸ್‌ ಏನು ಮಾಡಿದೆ : ಮೋದಿ

ಬಳ್ಳಾರಿ : ಕರ್ನಾಟಕದಲ್ಲಿರುವು ಸಿದ್ದರಾಮಯ್ಯ ಸರ್ಕಾರವನ್ನು ಸೀದಾ ರುಪಯ್ಯಾ ಸರ್ಕಾರ. ಈ ಸರ್ಕಾರ ಕರ್ನಾಟಕವನ್ನು ಸಾಲದ ಲ್ಲಿ ಮುಳುಗಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಮೋದಿ, ನಾವು ಉರಿ ಬಿಸಿಲನ್ನಾದರೂ ಸಹಿಸಿಕೊಳ್ಳುತ್ತೇವೆ, ಆದರೆ ಕಾಂಗ್ರೆಸನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರತೀ ಬಾರಿ ಚುನಾವಣೆಯಲ್ಲೂ ಸೋಲು ಗೆಲುವು ಎಂಬುದು ಸಾಮಾನ್ಯ. ಇಡೀ ದೇಶದಲ್ಲಿ  ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆ ಗೆಲುವಿಗಾಗಿ ಅಲ್ಲ. ಕರ್ನಾಟಕ ಜನತೆಯ ಭವಿಷ್ಯ ನಿರ್ಧರಿಸಲು. ರೈತರ ಭಾಗ್ಯವನ್ು ನಬದಲಿಸಲು,  ಮಹಿಳೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಎಂದಿದ್ದಾರೆ.
ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಐದು ವರ್ಷ ಆಡಳಿತ ನ ಡೆಸಿದ ಸಿದ್ದರಾಮಯ್ಯ ಗಣ ನೀತಿಯನ್ನು ಜಾರಿಗೆ ತರಲಿಲ್ಲ. ಮದ್ಯವರ್ತಿಗಳ ನ್ನು ಮುಂದಿಟ್ಟುಕೊಂಡು ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ದೇಶದ ಜನರ ದನಿ ಅಡಗುವಂತೆ ಮಾಡಿದೆ. ಕಾಂಗ್ರೆಸ್‌ ಸರ್ಕಾರ ದಲಿತರ, ಹಿಂದುಳಿದ ವರ್ಗದವರ , ಆದಿವಾಸಿಗಳ ವಿರೋಧಿ ಎಂದು ಜರಿದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿ ಮೋಸ ಮಾಡಿದೆ.ಗುಪ್ತ ಮತದಾನದ ಮೂಲಕ  ಸಿಎಂ ಸ್ಥಾನ ಖರ್ಗೆ ಕೈ ತಪ್ಪಿಸುವಂತೆ ವಂಚನೆ ಮಾಡಿದ್ದಾರೆ .ಬಿಜೆಪಿ ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಚಹಾ ಮಾರುವನನ್ನು ಪ್ರಧಾನಿಯನ್ನಾಗಿ ಮಾಡಿದ್ದು ಎಲ್ಲಾ ವರ್ಗದವರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಕರ್ನಾಟಕದ ಪ್ರಗತಿಯಾದರೆ,ದೇಶದ ಪ್ರಗತಿಯಾದಂತೆ. ಬಿಜೆಪಿ ಈ ಮಹಾಕಾರ್ಯಕ್ಕೆ ರಾಜ್ಯದ ಜನರು ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ. 

2 thoughts on “ಬಿಜೆಪಿ ದಲಿತರನ್ನು ರಾಷ್ಟ್ರಪತಿಯನ್ನಾಗಿಸಿದೆ, ಟೀ ಮಾರುವವನನ್ನು ಪ್ರಧಾನಿಯನ್ನಾಗಿಸಿದೆ, ಕಾಂಗ್ರೆಸ್‌ ಏನು ಮಾಡಿದೆ : ಮೋದಿ

Leave a Reply

Your email address will not be published.