ಮೋದೀಜೀ ಬಳ್ಳಾರಿಗೆ ಸ್ವಾಗತ : ರೆಡ್ಡಿಯ 35,000 ಕೋಟಿ ಹಗರಣದ ಬಗ್ಗೆ ಮಾತಾಡೋದನ್ನು ಮರೀಬೇಡಿ..!
ಬೆಂಗಳೂರು : ಇಂದು ಪ್ರಧಾನಿ ಮೋದಿ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮೋದಿ ಬಳ್ಳಾರಿಗೆ ಆಗಮಿಸುವುದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಮೋದಿಯ ಕಾಲೆಳೆದಿದ್ದಾರೆ.
ಮೋದಿಯವರೇ ನೀವು ಬಳ್ಳಾರಿಗೆ ಬರುತ್ತಿದ್ದೀರಿ, ನಿಮ್ಮ ಬಾಯಲ್ಲಿ ಭ್ರಷ್ಟಾಚಾರದ ವಿರುದ್ಧದ ಮಾತುಗಳು ಬರುವುದಿದೆ. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರು 35 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಯಡ್ಡಿ-ರೆಡ್ಡಿ ಇಬ್ಬರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದ್ದಾರೆ.
Dear PM Modi,
As you arrive in Bellary, we look forward to hear your commentary on corruption. Don’t forget to mention Reddy’s record scam score of 35,000 cr & still not out.
With star players like Yeddy-Reddy, your score in Karnataka will be well short of 60.#ModiHitWicket
— Siddaramaiah (@siddaramaiah) May 3, 2018