ಲೋಕಾಯುಕ್ತ ಕಚೇರಿಗೆ ಚಾಕು ಹಿಡಿದು ಬಂದ ಮಹಿಳೆ ಅರೆಸ್ಟ್‌ : ಪೊಲೀಸರಿಂದ ವಿಚಾರಣೆ

ಬೆಂಗಳೂರು : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ ಇಂದು  ಅಂತಹದ್ದೇ ಘಟನೆಯೊಂದು ಸ್ವಲ್ಪದರಲ್ಲೇ ತಪ್ಪಿದೆ.

ಗುರುವಾರ ಮಹಿಳೆಯೊಬ್ಬರು  ಚಾಕುವಿನ ಸಮೇತ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಕಚೇರಿಯ ಒ ಳಹೋಗುವ ಮುನ್ನ ತಪಾಸಣೆ ವೇಳೆ ಮೆಟಲ್‌ ಡಿಟೆಕ್ಟರ್‌ನಲ್ಲಿ ಮಹಿಳೆ ಬಳಿ ಇದ್ದ ಚಾಕು ಪತ್ತೆಯಾಗಿದೆ. ಕೂಡಲೆ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಬಂಧಿಸಿದ್ದಾರೆ.

ಚಾಕು ತಂದಿದ್ದ ಮಹಿಳೆಯನ್ನು ಸೋನಿಯಾ ರಾಣಿ ಎಂದು ಹೆಸರಿಸಲಾಗಿದೆ. ವಿಧಾನಸೌಧ ಪೊಲೀಸರು  ಸೋನಿಯಾ ರಾಣಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published.