ಉಡುಪಿಯ ಕೃಷ್ಣಮಠದಲ್ಲಿ ಮೋದಿಗೆ ಜೀವಭಯವಿತ್ತು : ಶೋಭಾ ಕರಂದ್ಲಾಜೆ

ಬೆಂಗಳೂರು :  ಪ್ರಧಾನಿ ಮೋದಿ ನಿನ್ನೆ ಉಡುಪಿಗೆ ತೆರಳಿದ್ದರೂ ಕೃಷ್ಣಮಠಕ್ಕೆ ತೆರಳಿರದ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆಯಾಗಿತ್ತು. ಈ ಕುರಿತು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಉಡುಪಿ ಮಠದಲ್ಲಿ ಮೋದಿಗೆ ಜೀವ ಭಯವಿತ್ತು ಆದ ಕಾರಣ ಅಲ್ಲಿಗೆ ಹೋಗಲಿಲ್ಲ ಎಂದಿದ್ದಾರೆ.

ಮಲ್ಲೆಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಉಡುಪಿ ಮಠಕ್ಕೆ ಪ್ರಧಾನಿ ಮೋದಿ ತೆರಳುವ ಸಲುವಾಗಿ ಎಸ್‌ಪಿಜಿ ಕಮಾಂಡೋಗಳು ಪರಿಶೀಲನೆ ನಡೆಸಿದ್ದರು. ಆದರೆ ಈ ವೇಳೆ  ಮೋದಿಗೆ ಜೀವಭಯವಿರುವ ಬಗ್ಗೆ ಗೊತ್ತಾಯಿತು. ಆದ ಕಾರಣ ಮಠಕ್ಕೆ ಭೇಟಿ ನೀಡಲಿಲ್ಲ ಎಂದಿದ್ದಾರೆ.

ಇದೇ ವೇಳೆ, ನಾಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸಹ ರಾಜ್ಯಕ್ಕೆ ಆಗಮಿಸಲಿದ್ದು, ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.

Leave a Reply

Your email address will not be published.