17 ಇಲ್ಲ 18ರಂದು ನಾನು ಸಿಎಂ ಆಗ್ತೀನಿ, ಇದರಲ್ಲಿ ಗುಲಗಂಜಿಯಷ್ಟೂ ಅನುಮಾನ ಬೇಡ : BSY

ಶಿವಮೊಗ್ಗ : ನಾನು ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯವನ್ನು ಮೂರು ಸುತ್ತು ಸುತ್ತಿದ್ದೇನೆ. ಎಲ್ಲಿ ಹೋದರೂ ಅದ್ಭುತ ಸ್ವಾಗತ ಸಿಕ್ಕಿದೆ. 85 ದಿನ 11 ಸಾವಿರ ದೂರ ಕ್ರಮಿಸಿದ್ದೇನೆ. ಅಮಿತ್ ಷಾ ಸರ್ವೆ ಹಾಗೂ ನಾನು ಕೊಟ್ಟ ಸಲಹೆ ಒಂದೇ ಆಗಿದ್ದ ಕಾರಣ ಅಭ್ಯರ್ಥಿಗಳ ಘೋಷಣೆ ಆಗಿದೆ ಎಂದು ಮಾಜಿ ಸಿಎಂ  ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ವೀರಶೈವ ಸಮಾಜದ ಜಾಗೃತ ಮತದಾರರ ವೇದಿಕೆಯಲ್ಲಿ ಮಾತನಾಡಿದ ಬಿಎಸ್‌ವೈ, ವೀರಶೈವ ಲಿಂಗಾಯತ ಎಂದು ಭಾಹಗ ಮಾಡಿದ್ದು ಸಿದ್ದು, ಅದನ್ನು ತಡೆಯುವ ಕೆಲಸ ನನ್ನದು. ಅಮಿತ್ ಷಾ ಹೇಳಿದ್ದಾರೆ ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಎಂಎಲ್ ಸಿ ರುದ್ರೆಗೌಡರನ್ನು ಮಾಡಲಾಗುವುದು. ಇದರಲ್ಲಿ ಸಂಶಯವಿಲ್ಲ.  17 ಇಲ್ಲ 18 ರಂದು ನಾನು ಸಿಎಂ ಆಗುತ್ತೆನೆ ಇದರಲ್ಲಿ ಗುಲಗಂಜಿಯಷ್ಟು ಅನುಮಾನ ಬೇಡ. ಈಶ್ವರಪ್ಪನವರನ್ನು ಗೆಲ್ಲಿಸುವ ಶಕ್ತಿ ನಿಮಗೆ ಇದೆ ಎಂದು ವೀರಶೈವರಿಗೆ ಕರೆ ನೀಡಿದ್ದಾರೆ.

15 ರಿಂದ 20 ಸಾವಿರ ಮತಗಳ ಅಂತರದಿಂದ ಈಶ್ವರಪ್ಪ ಗೆಲ್ಲುತ್ತಾರೆ. ಶಿಕಾರಿಪುರದಲ್ಲಿ ನಾನು ಹೆಚ‌್ಚು ಓಡಾಡುವುದಿಲ್ಲ. ಅಲ್ಲಿ ರಾಘವೇಂದ್ರ ನೋಡಿ ಕೊಳ್ಳುತ್ತಾರೆ. ಅಲ್ಲಿ ಕನಿಷ್ಟ 50 ಸಾವಿರ ಮತಗಳ ಅಂತರ ದಿಂದ ಗೆಲುವು ಕಾಣುತ್ತೇನೆ.ಶಿವಮೊಗ್ಗ ವನ್ನು ಇನ್ನಷ್ಟು ಅಭಿವೃದ್ದಿ ಮಾಡಬೇಕಿದೆ. 4 ರಂದು ಚುನಾವಣಾ ಪ್ರನಾಳಿಕೆ ಬಿಡುಗಡೆ ಮಾಡುತ್ತೆವೆ.ನಾನು ಈಶ್ವರಪ್ಪ ಹಾಗೂ ರುದ್ರೆಗೌಡರು ಸೇರಿ ಕೊಂಡು ಶಿವಮೊಗ್ಗ ಅಭಿವೃದ್ದಿ ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published.