ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯ ಮಗ, ನಿಜವಾದ ಗಂಡು ಹುಲಿ : ಜಯಮಾಲಾ

ಮೈಸೂರು :ಚಾಮುಂಡೇಶ್ವರಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ.  ಸಿಎಂ ಪರ ಸ್ಟಾರ್‌ ಪ್ರಚಾರಕರು ಅಖಾಡಕ್ಕಿಳಿದಿದ್ದಾರೆ.
ಟೌನ್ ಹಾಲ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದು, ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು, ಜಯಮಾಲಾ, ಪ್ರಗತಿಪರ ಚಿಂತಕರಾದ ಎಸ್.ಜಿ. ಸಿದ್ದರಾಮಯ್ಯ, ಮರುಳು ಸಿದ್ದಪ್ಪ, ಪಾ. ಮಲ್ಲೇಶ್, ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಕೆ.ಶಿವರಾಮ್ ಸೇರಿ ಹಲವರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ನಟಿ ಜಯಮಾಲಾ, ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಐದು ವರ್ಷ ಸ್ವಚ್ಛ ಆಡಳಿತ ನೀಡಿದ್ದಾರೆ. ಚಾಮುಂಡೇಶ್ಚರಿ ಮಣ್ಣಿನ ಮಗ ಸಿಎಂ ಸಿದ್ದರಾಮಯ್ಯ. ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ಚರಿ, ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಪಕ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಡು ಹುಲಿ ಎಂದಿದ್ದಾರೆ.

ಇದೇ ವೇಳೆ ಕಥುವಾದಲ್ಲಿ ಅಪ್ರಾಪ್ತೆ ಮೇಲಿನ ಅತ್ಯಾಚಾರ, ಹತ್ಯೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಜಯಮಾಲಾ,  ನಾನು ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಆರೋಪಿಗಳನ್ನ ಮರಣ ದಂಡನೆಗೆ ಗುರಿಪಡಿಸಬೇಕು. ದೇವಸ್ಥಾನದಲ್ಲಿ ಅತ್ಯಾಚಾರ ವಿಚಾರ ಬೇಸರ ತಂದಿತ್ತು. ನಾನು ಹಿಂದೂ ಆಗಿರೋದಕ್ಕ ಬೇಸರ ಆಗಿತ್ತು ಆಂದಿದ್ದೆ.ಕೋಮುವಾದ, ಅತ್ಯಾಚಾರದ ರಕ್ಷಣೆಗೆ ಬಿಜೆಪಿ ನಾಯಕರು ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಹಾಗೂ ಸಂವಿಧಾನ ಬದಲಾಯಿಸುವ ಮನಸ್ಥಿತಿ ಇರುವವರನ್ನ ತೊಲಗಿಸಬೇಕು. ಸ್ಥಿರ ಸರ್ಕಾರ ಇರಬೇಕು. ಇದೇ ನಮ್ಮ ಉದ್ದೇಶ. ಇದಕ್ಕಾಗಿ ಕಾಂಗ್ರೆಸ್‌ ಪರ  ಪ್ರಚಾರ ಮಾಡುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com