ಹೊಡಿ ಬಡಿ ಅನ್ನೋದೂ ಒಂದು ಸಿದ್ಧಾಂತಾನಾ ? : ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಪ್ರಭಾವಿ ಕಮಲ ನಾಯಕ !

ಮಂಗಳೂರು:  ಬಿಜೆಪಿ ಮಾಜಿ ಸಚಿವರೊಬ್ಬರು ಕಮಲ ತೊರೆದು ಕೈ ಹಿಡಿಯಲು ನಿರ್ಧರಿಸಿದ್ದಾರೆ. ಇಂದು ಮಾಜಿ ಸಚಿವ ಗಂಗಾಧರ ಗೌಡ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಮಂಗಳೂರಿನಲ್ಲಿಂದು ಕೇರಳದ ಮಾಜಿ ಸಿಎಂ ಉಮ್ಮನ್‌ ಚಾಂಡಿ ಸಮ್ಮುಖದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡ ಅವರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿದ್ದು ಈ ಹಿನ್ನೆಲೆಯಲ್ಲಿ ಗಂಗಾಧರ್‌ ಗೌಡ ಬಿಜೆಪಿ ತೊರೆಯುತ್ತಿದ್ದಾರೆ.

ಈ ವೇಳೆ ಮಾತನಾಡಿದ ಗಂಗಾಧರಗೌಡ, ಕಳೆದ ಬಾರಿ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದು ಆರ್.ಎಸ್.ಎಸ್.  ಆರ್.ಎಸ್.ಎಸ್ ಹಿಡನ್ ಅಜೆಂಡಾ ಗೊತ್ತಾಗಲ್ಲ.  ಆರ್.ಎಸ್.ಎಸ್ ಅಂದ್ರೆ ಕಲ್ಲಡ್ಕ ಪ್ರಭಾಕರ ಭಟ್ ಅಂದ್ಕೊಂಡಿದ್ವಿ.ಯಾವ ಗುಹೆ ಒಳಗೆ ಯಾರಿದ್ದಾರೆ ಗೊತ್ತಿಲ್ಲ. ಯಾವ ಮುಖವಾಡ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ಈಗ ಎಲ್ಲಾ ಆರ್.ಎಸ್.ಎಸ್ ಅಂತಾ ಹೇಳಿಕೊಂಡು ಬರ್ತಾರೆ. ಹಿಂದುತ್ವ ಇವರ ಸಿದ್ದಾಂತವಂತೆ,  ಹೊಡಿ ಬಡಿ ಅನ್ನೋದು ಒಂದು ಸಿದ್ಧಾಂತವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಿದ್ದಾರೆ.  ಆದ್ರೆ ಇವರು ಮಾಡುತ್ತಿರುವುದೇನು. ಬ್ರಹ್ಮ ಕಲಸ ಪ್ರತಿಷ್ಠಾಪನೆಗಳಂತ ಕೆಲಸ ಮಾತ್ರ.
ಸರ್ಕಾರಿ ಕಾರ್ಯಾಲಯಗಳಿಗೆ ತುಳು ಗಾದೆ ಹೇಳುವ ಹಾಗೆ ಮುಳ್ಳಿನ ಪಡಿ ಇಡಬೇಕು. ಅಂದ್ರೆ ಸರ್ಕಾರದ ಕಾರ್ಯಾಲಯಗಳನ್ನು ಬಂದ್ ಮಾಡಬೇಕು ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com