CM ಟಗರಿದ್ದಂತೆ, ಈ ಟಗರು ಒಂದ್ಸಲ ಗುದ್ದಿದ್ದಕ್ಕೆ ರೆಡ್ಡಿ ಈಗ್ಲೂ ನೋವು ಅನುಭವಿಸ್ತಿದ್ದಾರೆ : CM ಇಬ್ರಾಹಿಂ

ಹುಬ್ಬಳ್ಳಿ : ಮಾತೆತ್ತಿದ್ದರೆ ಮೋದಿ ಗುಜರಾತ್ ಮಾಡಲ್ ಎನ್ನುತ್ತಾರೆ. ಆದರೆ ಅದೇ ಗುಜರಾತಿ ಜನ ನಮ್ಮ ಊರಿನಲ್ಲಿ ಪಾನಿಪುರಿ ಮಾರೋಕೆ ಬರುತ್ತಿದ್ದಾರೆ. ಇದು ಗುಜರಾತ್ ಮಾಡೆಲ್ಲಾ ಎಂದು ಪ್ರಧಾನಿ ಮೋದಿಗೆ ಸಿಎಂ‌ ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.

ಕುಂದಗೋಳ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಇಬ್ರಾಹಿಂ, ಹೇಗಾದ್ರು‌ ಮಾಡಿ ನಮ್ಮ ಟಗರನ್ನು(ಸಿಎಂ) ಕೆಡವೋಕೆ ನೋಡ್ತಿದ್ದಾರೆ. ಆದ್ರೆ ಅದು ಆಗಲ್ಲ. ರೆಡ್ಡಿಗಳಿಗೆ ನಮ್ಮ ಟಗರು ಒಂದೇ ಒಂದು ಗುದ್ದು ಗುದ್ದಿದೆ. ಆ ನೋವೇ ಇನ್ನು ಹೋಗಿಲ್ಲ. ನಮ್ಮ ಟಗರನ್ನ ನೋಡಿದ್ರೆ ಜಗದೀಶ್ ಶೆಟ್ಟರ್ ಎದೆ ಟುಕು ಟುಕು ಎನ್ನುತ್ತೆ. ಸಿದ್ದರಾಮಯ್ಯ ಹೆಸರು ಕೇಳಿದ್ರ ಮೋದಿ ತಡರಾತ್ರಿ ದಗ್ಗನೆ ಎದ್ದು ಕೂರ್ತಾರೆ. ಇಂತಹ ಮೋದಿ ಸಿದ್ದರಾಮಯ್ಯನ ಸೋಲಿಸೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಹೇಗಾದರು ಮಾಡಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವನ್ನು ತೆಗೆಯಬೇಕು ಎಂದು ಬಿಜೆಪಿ ಯೋಚಿಸಿದೆ. ನನ್ನ ಜೀವನದ ಕೊನೆ ಆಸೆನೇ ಹಿಂದೂ-ಮುಸ್ಲಿಂರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕೆನ್ನುವುದು.  ಬಿಜೆಪಿಯವರ ಮಾತಿಗೆ ಕಿವಿಗೊಡಬೇಡಿ , ಶಿವಳ್ಳಿಗೆ ಮತನೀಡಿ ಶಾಂತಿ ಕಾಪಾಡಿ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

Leave a Reply

Your email address will not be published.