ಮೇಕಪ್‌ ಮಾಡ್ಕೊಂಡು ತಿರುಗಾಡೋ ಪ್ರಧಾನಿಯನ್ನು ಇದೇ ಮೊದಲ ಬಾರಿಗೆ ನೋಡ್ತಿರೋದು : ಕಾಂಗ್ರೆಸ್‌ ನಾಯಕ

ಹುಬ್ಬಳ್ಳಿ : ಸಿಎಂ ಅದ್ಮೇಲೆ ಸಿದ್ದರಾಮಯ್ಯ ನವರು 10 ಸಾರಿ ಕುಂದಗೋಳಕ್ಕೆ‌ ಬಂದಿದ್ದಾರೆ. ಸಿದ್ದರಾಮಯ್ಯನವರು ಸರ್ವ ಜನಾಂಗದ ಒಳಿತಿಗಾಗಿ ಸಾಕಷ್ಟು ಯೋಜನೆ ಕೊಟ್ಟ ನಾಯಕ. ಎಂದೂ ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಟಿಸಿಲ್ಲ ಎಂದು ಕುಂದಗೋಳ ಶಾಸಕ ಸಿ.ಎಸ್‌ ಶಿವಳ್ಳಿ ಹೇಳಿಕೆ ನೀಡಿದ್ದಾರೆ.

ಜಿಎಸ್‌ಟಿ ಅಂದ್ರೆ ಕೇಂದ್ರ ಸರ್ಕಾರದ ಹಜಾಮತಿ. 8 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ‌ ಮಾಡಿರೋದು‌ ಸಿದ್ದರಾಮಯ್ಯ. ಹಸಿದ ಹೊಟ್ಟೆ ತುಂಬಿಸಿರೋದು ಸಿದ್ದರಾಮಯ್ಯನವರು. ಬಡತನ, ಹಸಿವನ್ನು ಅನುಭಸಿದವರಿಗೇ ಗೊತ್ತು. ವೋಟಿಗಾಗಿ ಪ್ಲಾಸ್ಟಿಕ್ ಆಕಳ‌ ಪೊಜಿಸೋದೇ ಬಿಜೆಪಿ ಕೆಲಸ. ಮೋದಿ ನಿರುದ್ಯೋಗಗಳಿಗೆ ಉದ್ಯೋಗ ಕೊಡಲೇ ಇಲ್ಲ. ಬ್ಯಾಂಕ್ ರಾಷ್ಟ್ರೀಕರಣ ಮಾಡಿರೋದು ಶ್ರೀಮತಿ ಇಂದಿರಾಗಾಂಧಿ. ಹಿಂದೂ ಧರ್ಮವನ್ನು ವೋಟಿಗಾಗಿ ಬಳಸಿರೋದು ಬಿಜೆಪಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರದು ಉತ್ತರಕುಮಾರನ ಪೌರುಷ. ಮತದಾರರು ಬಿಜೆಪಿಯನ್ನ‌ ಕಿತ್ತು ಹಾಕಬೇಕು. ಈ ದೇಶದಲ್ಲಿ ಮೇಕಪ್ ಮಾಡಿಕೊಳ್ಳುವ ಪ್ರಧಾನಿಯನ್ನು ಎಂದಿಗೂ ಕಂಡಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ತಕ್ಕ ಉತ್ತರ ಕೊಡ್ತಾರೆ. ಸೂರ್ಯ ಚಂದ್ರರು ಎಷ್ಟು ಸತ್ಯವೋ ಸಿದ್ದರಾಮಯ್ಯ ನವರು ಸಿಎಂ ಆಗೋದು ಅಷ್ಟೇ ಸತ್ಯ.  ಕುಂದಗೋಳ ‌ತಾಲೂಕಿನಲ್ಲಿ ಬದಲಾವಣೆ ಬಂದಿದ್ರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ.  ಬಿಜೆಪಿ ಕಪಟ ನಾಟಕ ಜಾಸ್ತಿ ದಿನ ನಡೆಯೋದಿಲ್ಲ. ಕುಂದಗೋಳದಲ್ಲೂ ಮತ್ತೆ‌ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com