JDS ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗಬೇಕು ಎಂಬುದು ಜನರ ಆಶಯ : ಕುಮಾರಸ್ವಾಮಿ

ಬೀದರ್ : ದೇವೆಗೌಡರನ್ನ ಪ್ರದಾನಿ ಮೋದಿ ಗುಣಗಾನ ಮಾಡಿದ ವಿಚಾರವಾಗಿ ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಜೆಡಿಎಸ್ ರ್ಯಾಲಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ದೇಶದ ಕಾಂಗ್ರೆಸ್ ನಾಯಕರ ಬಾಯಿ ತೆರೆದು ಮುಚ್ಚಿಸಿಬಿಟ್ಟರು ? ಅದೆ ರೀತಿ ದೇವೆಗೌಡರ ಬಾಯಿ ಮುಚ್ಚಿಸಬೆಕು ಅಂತ ಪ್ರಯತ್ನ ಪಟ್ಟಿದ್ರು ‘

‘ ದೇವೆಗೌಡರು ತಮ್ಮ ಅವಧಿಯಲ್ಲಿ ತಪ್ಪು ಮಾಡಿದ್ದರಾ..? ಭ್ರಷ್ಟಾಚಾರ ಮಾಡಿದ್ದಾರಾ..? ಎಂದು ಕೆದಕಿ ಏನು ಸಿಗದೇ ದೇವೆಗೌಡರ ಶಕ್ತಿ ಮನವರಿಕೆಯಾಗಿ ಮೋದಿ ಹಾಗೆ ಮಾತಾಡಿರಬಹುದು ‘ ಎಂದರು.

‘ ಬಿಜೆಪಿ ಸೋಲಿನ ಭಯದಿಂದ ರಾಜ್ಯದಲ್ಲಿ ಹೆಚ್ಚು ಐಟಿ ದಾಳಿ ನಡೆಯುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುವುದಕ್ಕಿಂತ ಕಿಂಗ್ ಆಗಬೆಕು ಎಂಬುವುದು ಜನರ ಆಶಯವಾಗಿದೆ. ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ‘

‘ಮೈತ್ರಿ ಬಗ್ಗೆ ಚರ್ಚೆ ಮಾಡಬೆಕಾದ್ರೆ ವಿಮಾನದಲ್ಲಿ ಮಾಡ್ತಾರಾ ? ಚರ್ಚೆ ಮಾಡ್ಬೆಕು ಅಂದ್ರೆ ಇಲ್ಲೆ ಮಾಡ್ತಾರೆ. ಸಿದ್ದರಾಮಯ್ಯ ಅವರದ್ದು ಇರದು ಒಂದು ಒಟು ಸಿಎಂ ಯಾರಿಗೆ ಮಾಡಬೆಕು ಎಂದು ಜನ ತಿರ್ಮಾನ ಮಾಡ್ತಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com