ಬಯಲಾಯ್ತು IPL ಮಿಸ್ಟರಿ ಗರ್ಲ್ ರಹಸ್ಯ : CSK ಪಂದ್ಯಗಳಿಗೆ ಬರೋದು ಈ ಆಟಗಾರನಿಗಾಗಿ..!

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಶುರುವಾಗಿ ಮೂರು ವಾರಗಳಿಗೂ ಹೆಚ್ಚಿನ ಸಮಯ ಕಳೆದಿದ್ದು, ದೇಶದ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಟ್ರೋಫಿ ಗೆಲ್ಲುವ ಕನಸನ್ನು ಹೊತ್ತಿರುವ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೇಲೇರಲು ಸೆಣಸಾಟ ನಡೆಸುತ್ತಿವೆ.

ಈ ಎಲ್ಲದರ ನಡುವೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಚಿತ್ರವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಡುವ ಎಲ್ಲ ಪಂದ್ಯಗಳಲ್ಲಿ ಮೈದಾನದ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಆದರೆ ಆಕೆ ಯಾರು ಎಂಬುದೇ ಯಾರಿಗೂ ತಿಳಿದಿರಲಿಲ್ಲ. ಕೆಲವು ಫೇಸ್ಬುಕ್ ಟ್ರೋಲ್ ಪೇಜ್ ಗಳು ಈಕೆಯನ್ನು ಪಾರ್ಲೆ-ಜಿ ಬಿಸ್ಕತ್ ಪಾಕೆಟ್ ಮೇಲೆ ಕಾಣಿಸಿಕೊಳ್ಳುವ ಬಾಲಕಿಯನ್ನೇ ಹೋಲುತ್ತಾಳೆ ಎಂದಿದ್ದಾರೆ.

Image result for ipl mystery girl 2018 chahar parle

ಈ ಮಿಸ್ಟರಿ ಗರ್ಲ್ ಯಾರೆಂಬುದು ಈಗ ಬಯಲಾಗಿದೆ. ಯುವತಿ ಚೆನ್ನೈ ಪಂದ್ಯಗಳಿಗೆ ಹಾಜರಾಗೋದು ಯಾಕೆ ಎಂಬುದೂ ಸಹ ಬಹಿರಂಗಗೊಂಡಿದೆ. ಈ ಯುವತಿಯ ಹೆಸರು ಮಾಲತಿ ಚಹರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹರ್ ಅವರ ಅಕ್ಕ. ತಮ್ಮನ ಆಟವನ್ನು ಕಣ್ತುಂಬಿಕೊಳ್ಳಲು, ಆತನ ತಂಡವನ್ನು ಹುರಿದಂಬಿಸಲು ಮೈದಾನಕ್ಕೆ ಬರುತ್ತಾರೆ. ಮಾಲತಿ ಅವರಿಗೆ ರಾಹುಲ್ ಚಹರ್ ಎಂಬ ಇನ್ನೊಬ್ಬ ಸೋದರನೂ ಇದ್ದು, ಆತ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಾನೆ.

Image result for ipl mystery girl 2018 chahar deepak

Leave a Reply

Your email address will not be published.

Social Media Auto Publish Powered By : XYZScripts.com