ಹೈಕಮಾಂಡ್‌ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡದ ಜನಾರ್ಧನ ರೆಡ್ಡಿ ಮಾಡಿದ್ದೇನು ?

ಮೊಳಕಾಲ್ಮೂರು : ಬಿಜೆಪಿ ವರಿಷ್ಠರ ಕಟ್ಟಪ್ಪಣೆ ಮೀರಿಯೂ ಗಾಲಿ ಜನಾರ್ದನ ರೆಡ್ಡಿ ತನ್ನ ಗೆಳೆಯ ಶ್ರೀರಾಮುಲು ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ವರಿಷ್ಠ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಗೆಳೆಯ ಶ್ರಿರಾಮುಲುನನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

G Janardhan Reddy, suspended BJP MLC, addressing the media in Bangalore on Justice U.L. Bhat Commission, which is inquiring into the illegal mining activities in the State decided to take the services of the CBI.
Photo: K. Gopinathan 22-11-2006

ಶ್ರೀರಾಮುಲು ಪರ ಪ್ರಚಾರಕ್ಕಾಗಿಯೇ ಮೊಳಕಾಲ್ಮುರಿನ ಹಾನಗಲ್ ಸಮೀಪ ತಾತ್ಕಾಲಿಕ ಮನೆ ಮಾಡಿಕೊಂಡಿದ್ರು. ಆದ್ರೆ ವರಿಷ್ಠ ಖಡಕ್ ಎಚ್ಚರಿಕೆಗೆ ಬೆಂಗಳೂರಿಗೆ ವಾಪಾಸ್ ಆಗಿದ್ರು. ಆದರೆ ಈಗ ಮತ್ತೆ ಧಿಡೀರ್ ಪ್ರತ್ಯಕ್ಷ ಆಗಿದ್ದು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಕೇಸರಿ ಪಾಳಯದಲ್ಲಿ ಮೂಲೆಗುಂಪಾಗಿದ್ದ ಗಾಲಿ ಜನಾರ್ದನ ರೆಡ್ಡಿ ಪಾಲಿಟಿಕ್ಸ್ ಎಂಟ್ರಿಗೆ ಒಂದಲ್ಲ ಒಂದು ವಿಘ್ನಗಳು ಎದುರಾಗ್ತಿದೆ.ಆದರೆ ರೆಡ್ಡಿ ವರಿಷ್ಠರ ಮಾತಿಗೂ ಬೆಲೆಕೊಡದೆ ಶ್ರೀರಾಮುಲು ಪರ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com