Moral Policing : ಕೋಲ್ಕತಾ ಮೆಟ್ರೋದಲ್ಲಿ ಪರಸ್ಪರ ಹತ್ತಿರ ನಿಂತ ಯುವಜೋಡಿ ಮೇಲೆ ಹಲ್ಲೆ

ಕೋಲ್ಕತಾದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಜೋಡಿಯೊಂದು ಪರಸ್ಪರ ತುಂಬಾ ಹತ್ತಿರ ನಿಂತುಕೊಂಡಿದ್ದರೆಂಬ ಕಾರಣಕ್ಕೆ ಅವರಿಬ್ಬರ ಮೇಲೆ ಜನರ ಗುಂಪೊಂದು ನಿಂದಿಸಿ, ಕೆಳಗೆ ತಳ್ಳಿ, ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಜನರ ಗುಂಪು ಒಟ್ಟಾಗಿ ಯುವಕನ ಮೇಲೆ ಹಲ್ಲೆ ನಡೆಸುವಾಗ ಜೊತೆಗಿದ್ದ ಯುವತಿ ಆತನ ರಕ್ಷಣೆಗೆ ಮುಂದಾಗಿರುವುದು ಪ್ರಯಾಣಿಕರೊಬ್ಬರು ಕ್ಲಿಕ್ಕಿಸಿದ ಚಿತ್ರದಲ್ಲಿ ಸೆರೆಯಾಗಿದೆ. ಯುವಕನನ್ನು ಥಳಿಸುತ್ತಿದ್ದ ಗುಂಪನ್ನು ತಡೆಯಲು ಪ್ರಯತ್ನಿಸಿದ ಆಕೆಯ ಮೇಲೆಯೂ ಸಹ ಕೆಲವರು ಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಮೆಟ್ರೋ ರೈಲಿನಲ್ಲಿ ಯುವಜೋಡಿ ಮೇಲೆ ನಡೆದಿರುವ ಈ ಅನೈತಿಕ ಪೋಲೀಸ್ ಗಿರಿಯನ್ನು ವಿರೋಧಿಸಿ, ಕೋಲ್ಕತಾದ ವಿವಿಧ ಕಾಲೇಜುಗಳ ಸುಮಾರು 50 ವಿದ್ಯಾರ್ಥಿಗಳ ಗುಂಪು, ದಮ್ ದಮ್ ಮೆಟ್ರೋ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com