ವಾಟಾಳ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ : ಪ್ರಣಾಳಿಕೆಯಲ್ಲಿ ಏನೇನಿದೆ ಅಂತ ನೋಡಿ….ಆಮೇಲೆ…!

ಬೆಂಗಳೂರು : ಈ ಬಾರಿ ವಿಧಾನಸಭಾ ಚುನಾವಣೆಗೆ ನಿಂತಿರುವ ವಾಟಾಳ್‌ ಪಕ್ಷದ ನಾಯಕ ವಾಟಾಳ್ ನಾಗರಾಜ್ ಇಂದು ನಗರದ ವುಡ್ ಲ್ಯಾಂಡ್ ಹೊಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ವಾಟಾಳ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಣಾಳಿಕೆಯ ಹೈಲೈಟ್ಸ್ ಇಲ್ಲಿದೆ.

ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು.
ಕತ್ತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು.
ಕತ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ‌ ಸ್ಥಾಪನೆ ಮಾಡಬೇಕು.
ಕತ್ತೆ ಧರ್ಮದೇವತೆ, ಆದ್ದರಿಂದ ಕತ್ತೆಗೆ ಗೌರವ ನೀಡಬೇಕು.
ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು. ಪ್ರೇಮ ವಿವಾಹಕ್ಕೆ 50 ಸಾವಿರ ಗೌರವ ಧನಸಹಾಯ ನೀಡಬೇಕು.
ರಾಜಕುಮಾರ್, ಬೇಂದ್ರೆ, ಮಾಸ್ತಿ, ಗುಬ್ಬಿವೀರಣ್ಣ ಮುಂತಾದವರ ಪ್ರತಿಮೆ ನಿರ್ಮಾಣವಾಗಬೇಕು.
ಬಡ ಹೆಣ್ಣುಮಕ್ಕಳ ಮದುವೆಗೆ ಒಂದು ಲಕ್ಷ ಹಣ ನೀಡಬೇಕು.

ಆಟೋರಿಕ್ಷಾದವರಿಗೆ ರೈನ್‌ಕೋಟ್‌ ವಿತರಣೆ.

ನಗರದಲ್ಲಿ ಕನಿಷ್ಠ 20 ಸಾವಿರ ಶೌಚಾಲಯ ನಿರ್ಮಾಣ  ಮಾಡುವುದು.

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು

ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕು.

ಉಚಿತ ಔಷಧಿ ವ್ಯವಸ್ಥೆ, ಕಲ್ಯಾಣ ಮಂಟಪ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com