ಕೇವಲ 5 ನಿಮಿಷ ಸುಳ್ಳು ಹೇಳದೆ ಜನರ ಎದುರು ನಿಲ್ಲಿ ಸಾಕು : ಪ್ರಧಾನಿಗೆ ರಾಹುಲ್‌ ಸವಾಲ್‌

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಕೇವಲ ರಾಜ್ಯ ನಾಯಕರಲ್ಲ, ರಾಷ್ಟ್ರ ನಾಯಕರ ಮಧ್ಯೆಯೂ ವಾಕ್ಸಮರ ಪ್ರಾರಂಭವಾಗಿದೆ.

ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ರಾಜ್ಯದಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರನ್ನು ಕರೆತರಲಾಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಕರೆತಂದಿದ್ದಾರೆ.

ಮಂಗಳವಾರ ಪ್ರಧಾನಿ ಮೋದಿ ಸಂತೇಮರಳ್ಳಿಯಲ್ಲಿ ನಡೆದ ಬಿಜೆಪಿ  ಸಮಾವೇಶದಲ್ಲಿ ಮಾತನಾಡುವ ವೇಳೆ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹದಿನೈದು ನಿಮಿಷ ಚೀಟಿಯಿಲ್ಲದೆ ಜನರ ಎದುರು ರಾಹುಲ್ ಮಾತನಾಡಲಿ ಸಾಕು, ಅದೇ ನಮ್ಮ ಸೌಭಾಗ್ಯ ಎಂದಿದ್ದರು. ಇದಕ್ಕೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿದ್ದು,  ಹದಿನೈದು ನಿಮಿಷ ಚೀಟಿ ಇಲ್ಲದೆ ಜನರ ಎದುರು ಮಾತನಾಡಲು ಮಾನ್ಯ ಮೋದೀಜಿ ಚೀಟಿ ನೋಡಿಕೊಂಡು ನನಗೆ ಸವಾಲು ಹಾಕಿದ್ದಾರೆ, ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.
ಜತೆಗೆ ನಾನೊಂದು ಅವರಿಗೆ ಸವಾಲು ಹಾಕುತ್ತೇನೆ, 15 ನಿಮಿಷ ಬೇಡ, ಕೇವಲ ಐದು ನಿಮಿಷ ಒಂದು ಸುಳ್ಳು ಹೇಳದೆ ಜನರ ಎದುರು ಮೋದಿ ಭಾಷಣ ಮಾಡಲಿ ಸಾಕು ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com