ನಾನು ಮಂತ್ರಿಯಾಗ್ತೀನಿ, ಆಮೇಲೆ ನೋಡಿ ಗಿನ್ನಿಸ್‌ ರೆಕಾರ್ಡ್‌ ಲೆವೆಲ್‌ಗೆ ಕೆಲ್ಸ ಮಾಡ್ತೀನಿ : ಜಮೀರ್ ಅಹ್ಮದ್‌

ಬೆಂಗಳೂರು : ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಾನು ಮಂತ್ರಿಯಾಗುತ್ತೇನೆ. ಆಮೇಲೆ ನೋಡಿ ಗಿನ್ನೆಸ್‌ ರೆಕಾರ್ಡ್‌ನಲ್ಲಿ ದಾಖಲಾಗುವಂಹ ಕೆಲಸ ಮಾಡುತ್ತೇನೆ ಎಂದು ಶಾಸಕ ಜಮೀರ್‌ ಅಹ್ಮದ್ ಹೇಳಿದ್ದಾರೆ.

ಬುಧವಾರ ಚಾಮರಾಜನಗರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಬೇಕು. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾನು ಮಂತ್ರಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ. ನಾನು ಮಂತ್ರಿಯಾದರೆ  ನಿಮ್ಮ ಮಗ ಜಮೀರ್ ಎಂತಹ ಕೆಲಸ ಮಾಡುತ್ತಾನೆ ನೋಡಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com