5 ವರ್ಷದಲ್ಲಿ ಸಿದ್ದರಾಮಯ್ಯ ಸಗಣಿ ತಿಂದಿಲ್ಲ, ಆದರೆ ಅವರ ಪಕ್ಷದ ಕೆಲವರು ತಿಂದಿರಬಹುದು : ಪ್ರಕಾಶ್ ರೈ

ಬಳ್ಳಾರಿ : ಸಿದ್ದರಾಮಯ್ಯ ಐದು ವರ್ಷ ಆಡಳಿತ ಮಾಡಿದ್ದಾರೆ. ಆದರೆ ಐದು ವರ್ಷದಲ್ಲಿ ಅವರು ಸಗಣಿ ತಿನ್ನುವ ಕೆಲಸ ಮಾಡಿಲ್ಲ. ಆದರೆ ಅವರ ಪಕ್ಷದ ಕೆಲ ನಾಯಕರು ಮಾಡಿರಬಹುದು ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಸ್ವಲ್ಪ ಮಟ್ಟಿಗಿನ ಕೆಲಸ ಮಾಡಿದೆ. ಸಿದ್ದರಾಮಯ್ಯ ನನಗೆ ಪರಿಚಿತರು. ಅವರು ಭ್ರಷ್ಟಾಚಾರ ಮಾಡಿ ಸಗಣಿ ತಿಂದಿಲ್ಲ . ಆದರೆ ಇವರು ಬಿಜೆಪಿಯವರಂತಲ್ಲ. ಮೊದಲು ದೊಡ್ಡ ಕಳ್ಳರನ್ನು ಕೆಳಗಿಳಿಸಿ ಬಳಿಕ ಚಿಕ್ಕ ಚಿಕ್ಕ ಕಳ್ಳರನ್ನು ಹಿಡಿಯಬೇಕಿದೆ ಎಂದಿದ್ದಾರೆ.

ನಾನು ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ಮೋದಿ ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ಆದರೆ  ್ವರ ಪಕ್ಕದಲ್ಲೇ ಭ್ರಷ್ಟರನ್ನು ಕೂರಿಸಿಕೊಂಡಿದ್ದಾರೆ. ದೇಶವನ್ನು ಲೂಟಿ ಹೊಡೆಯುತ್ತಿರುವುದು ಮೋದಿಯೇ. ಅಲ್ಲದೆ ಕನ್ನಡದ ಬಗ್ಗೆ ಕೂಡ ಮಾತನಾಡುತ್ತಾರೆ. ಮಾತನಾಡುವ ನೈತಿಕತೆ ಇವರಿಗೇನಿದೆ ಎಂದು ಕಿಡಿಕಾರಿದ್ದಾರೆ.

ನಾನು ಪ್ರಶ್ನೆ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ  ಬಿಜೆಪಿಯವರು ನನ್ನ ಹೆಂಡತಿ, ಮಗನ ಬಗ್ಗೆ ಮಾತಾಡ್ತಾರೆ. ನನ್ನ ಮಗ ಸತ್ತಾಗ ನಾನು ಯಾರ ಮಗ್ಗುಲಲ್ಲಿ ಮಲಗಿದ್ದೆ ಅಂತಾರೆ, ನಾನು ಧರ್ಮ ವಿರೋಧಿಯಂತೆ. ಇಂತಹ ಮಾತು ಕೇವಲ ಬಿಜೆಪಿಗರ ಬಾಯಿಂದ ಮಾತ್ರ ಬರಲು ಸಾಧ್ಯ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com