ಪತ್ನಿಯ ಹುಟ್ಟುಹಬ್ಬಕ್ಕೆ ಗೆಲುವಿನ ಗಿಫ್ಟ್ ನೀಡಿದ ಕೊಹ್ಲಿ : ಪಂದ್ಯದ ಬಳಿಕ ಅನುಷ್ಕಾ ಹೇಳಿದ್ದೇನು..?

ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಂಗಳವಾರ 30ನೇ ವಸಂತಕ್ಕೆ ಕಾಲಿರಿಸಿದ್ದರು. ವಿಶೇಷವೆಂದರೆ ಮಂಗಳವಾರ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಪತಿ ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು 14 ರನ್ ಗಳಿಂದ ಮಣಿಸಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಈ ಗೆಲುವು ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ನನ್ನಿಂದ ಚಿಕ್ಕ ಉಡುಗೊರೆ ಎಂದಿದ್ದಾರೆ. ಪಂದ್ಯ ಮುಗಿದ ನಂತರ ಅನುಷ್ಕಾ ಶರ್ಮಾ ಪತಿಯೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಫೋಟೊ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದು ನಾನು ಆಚರಿಸಿಕೊಳ್ಳುತ್ತಿರುವ ‘ ಬೆಸ್ಟ್ ಬರ್ತ್ ಡೇ ‘ ಎಂದು ಹೇಳಿದ್ದಾರೆ.

‘ ವಿರಾಟ್ ಅತ್ಯಂತ ಕರುಣಾಳು ಹಾಗೂ ಧೈರ್ಯಶಾಲಿ, ಕೊಹ್ಲಿ ಜೊತೆ ನನ್ನ ಇದುವರೆಗಿನ ಬೆಸ್ಟ್ ಹುಟ್ಟಹಬ್ಬವಾಗಿದೆ,  ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು ‘ ಎಂದು ಬರೆದುಕೊಂಡಿದ್ದಾರೆ.

 

One thought on “ಪತ್ನಿಯ ಹುಟ್ಟುಹಬ್ಬಕ್ಕೆ ಗೆಲುವಿನ ಗಿಫ್ಟ್ ನೀಡಿದ ಕೊಹ್ಲಿ : ಪಂದ್ಯದ ಬಳಿಕ ಅನುಷ್ಕಾ ಹೇಳಿದ್ದೇನು..?

Leave a Reply

Your email address will not be published.