ಉಡುಪಿ : ಮಾಜಿ ಪ್ರಧಾನಿ H.D ದೇವೇಗೌಡರನ್ನು ಕೊಂಡಾಡಿದ ಹಾಲಿ ಪ್ರಧಾನಿ ಮೋದಿ

ಉಡುಪಿ : ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲೇ ಬೇಕು ಎಂಬ ಕಾರಣದಿಂದ ಪ್ರಧಾನಿ ಮೋದಿ ರಾಜ್ಯದೆಲ್ಲಡೆ ಪ್ರವಾಸ ಪ್ರಾರಂಭಿಸಿದ್ದಾರೆ.

ಕಾರ್ಮಿಕ ದಿನವಾದ ಇಂದು ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿಸಿದ್ದಾರೆ. ಸಂತೇಮರಳ್ಳಿ ಬಳಿಕ ಉಡುಪಿಯಲ್ಲಿ  ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರನ್ನು ಕೊಂಡಾಡಿದ್ದಾರೆ.

ದೇಶದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ದೇವೇಗೌಡರನ್ನು ನಾನು ಗೌರವದಿಂದ ಕಾಣುತ್ತೇನೆ. ಅವರು ನಮ್ಮ ಕಚೇರಿಗೆ ಬಂದರೆ ನಾನೇ ಅವರನ್ನು ಸ್ವಾಗತಿಸುತ್ತೇನೆ. ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿರುವ ಅವರನ್ನು ರಾಹುಲ್‌ ಗಾಂಧಿ ಕೀಳಾಗಿ ಕಂಡಿದ್ದಾರೆ. ರಾಹುಲ್  ಜೀವನ ಈಗ ಆರಂಭವಾಗಿದೆ. ಆದರೆ ದೇವೇಗೌಡರದ್ದು ಹಿರಿಯ ವ್ಯಕ್ತಿತ್ವ. ಗೌಡರನ್ನು ಟೀಕಿಸಿದ್ದು ಸರಿಯಲ್ಲ ಎಂದಿದ್ದಾರೆ.

ಇದರಿಂದ ಕಾಂಗ್ರೆಸ್‌ನವರ ಮನಸ್ಥಿತಿ ಎಂತದ್ದು ಎಂದು ಗೊತ್ತಾಗುತ್ತದೆ. ಈ ರೀತಿ ಮನಸ್ಥಿತಿಯುಳ್ಳ ಕಾಂಗ್ರೆಸಿಗರು ಜನತೆಯ ಬಗ್ಗೆ ಒಳ್ಳೆಯದನ್ನು ಬಯಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಾವು ಜನರ ಜೀವನ ಸರಳವಾಗಿಸುವುದರ ಬಗ್ಗೆ ಯೋಚಿಸುತ್ತಿದ್ದರೆ, ಕಾಂಗ್ರೆಸ್‌ನವರು ಅದನ್ನು ಹಾಳು ಮಾಡಲು ನೋಡುತ್ತಿದ್ದಾರೆ.
ದೇವೇಗೌಡರು ಯಾವಾಗ ನನ್ನನ್ನು ನೋಡಬೇಕು ಎಂದರೂ ಕೂಡಲೆ ಭೇಟಿ ಮಾಡಿದ್ದೇನೆ. ನಮ್ಮ ಸಿದ್ಧಾಂತಗಳು ಬೇರೆ ಇರಬಹುದು. ಆದರೆ ಅವರೊಬ್ಬ ಮುತ್ಸದ್ಧಿ ರಾಜಕಾರಣಿ ಎಂದಿದ್ದಾರೆ.

6 thoughts on “ಉಡುಪಿ : ಮಾಜಿ ಪ್ರಧಾನಿ H.D ದೇವೇಗೌಡರನ್ನು ಕೊಂಡಾಡಿದ ಹಾಲಿ ಪ್ರಧಾನಿ ಮೋದಿ

Leave a Reply

Your email address will not be published.

Social Media Auto Publish Powered By : XYZScripts.com