ಮೋದಿ ಅನ್ನೋ ಹುಲಿ ಬರ್ತಿರುವಾಗ ಸಿದ್ರಾಮಯ್ಯ ಅನ್ನೋ ಇಲಿ, ನರಿ ಎಲ್ಲ ಬಿಲ ಸೇರ್ಕೋಬೇಕು : ಈಶ್ವರಪ್ಪ

ಶಿವಮೊಗ್ಗ : ಮೋದಿ ಎಂಬ ಹುಲಿ ರಾಜ್ಯಕ್ಕೆ ಬರುತ್ತಿರುವಾಗ ಸಿದ್ಧರಾಮಯ್ಯನಂತಹ ನರಿ, ಇಲಿಗಳೆಲ್ಲವೂ ಬಿಲ ಸೇರಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಮನೆಯಿಂದ ಹೊರಹಾಕ್ತೀನಿ ಎಂದು ಕುಮಾರಸ್ವಾಮಿ ಕುರಿತ ದೇವೆಗೌಡ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ದೇವೆಗೌಡರ ಮನೆ ಒಡೆಯದಿರಲಿ ಎಂಬುದೇ ನಮ್ಮ ಆಶಯ. ಜೆಡಿಎಸ್ ಜೊತೆ ಮೈತ್ರಿ ಸಮಸ್ಯೆಯೇ ಉದ್ಭವಿಸುವುದಿಲ್ಲ.  ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರವುದು ಖಚಿತ ಎಂದಿದ್ದಾರೆ.

ಮಹದಾಯಿ ವಿಷಯದಲ್ಲಿ ಮೋದಿಗೆ ಟ್ವೀಟ್ ಮಾಡಲು, ಸಿದ್ದರಾಮಯ್ಯ ಗೆ ನಾಚಿಕೆಯಾಗಬೇಕು. ಮೊದಲಿನಿಂದಲೂ ಅವರ ಸರ್ಕಾರವೇ, ಆಡಳಿತದಲ್ಲಿತ್ತು. ಸಿದ್ಧರಾಮಯ್ಯ, ಹೆಚ್.ಕೆ. ಪಾಟೀಲ್ ಮತ್ತಿರರು ಸೋನಿಯಾ ಗಾಂಧಿಯನ್ನ ಭೇಟಿ ಮಾಡಿ ಮಹದಾಯಿ ನೀರನ್ನು ರಾಜ್ಯಕ್ಕೆ ಬಿಡಲು ಗೋವಾ ಸರ್ಕಾರ ಸಿದ್ಧವಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ, ಸೋನಿಯಾ ಗಾಂಧಿ, ರಾಜ್ಯಕ್ಕೆ ಗೋವಾ ನೀರು ಬಿಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಮೋದಿಗೆ ಮಹದಾಯಿ ವಿಷಯದಲ್ಲಿ ಟ್ವೀಟ್ ಮಾಡುವ ಮೊದಲು ಸಿದ್ಧರಾಮಯ್ಯ ವಾಸ್ತವಾಂಶ ತಿಳಿಯಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗ ಹಾಗೂ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಆ ವರ್ಗಗಳ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದ್ದಾರೆ.ಈ ಪರಿಸ್ಥಿತಿ ರಾಜ್ಯದ ಎಲ್ಲೆಡೆ ಇದೆ. ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡಿದವರಿಗೆ ಜನ ಶಾಸ್ತಿ ಮಾಡಲಿದ್ದಾರೆ. ಯಡಿಯೂರಪ್ಪ ಸಿಎಂ ಆಗುವುದರಲ್ಲಿ ಹಿಂದುಳಿದ ವರ್ಗಗಳ ಜನರ ಬೆಂಬಲ ಹೆಚ್ಚಿರಲಿದೆ ಎಂದಿದ್ದಾರೆ.

One thought on “ಮೋದಿ ಅನ್ನೋ ಹುಲಿ ಬರ್ತಿರುವಾಗ ಸಿದ್ರಾಮಯ್ಯ ಅನ್ನೋ ಇಲಿ, ನರಿ ಎಲ್ಲ ಬಿಲ ಸೇರ್ಕೋಬೇಕು : ಈಶ್ವರಪ್ಪ

  • May 2, 2018 at 7:42 PM
    Permalink

    Ree swamy mathedare modi modi anthira yestu sala ugibeku nimge nemmadenri koduge nachike agalva thuh Nimm third class ppl

    Reply

Leave a Reply

Your email address will not be published.

Social Media Auto Publish Powered By : XYZScripts.com