ಅವನ್ಯಾವನ್ರಿ ಸಿಎಂ, ಅವನಿಗೇನ್‌ ಯೋಗ್ಯತೆ ಇದೆ ಮೋದಿ ಬಗ್ಗೆ ಮಾತಾಡಕ್ಕೆ : ಗುಡುಗಿದ BSY

ಮೈಸೂರು : ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಟ್ವಿಟರ್ ನಲ್ಲಿ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವುದಕ್ಕೆ ಮಾಜಿ ಸಿಎಂ ಬಿಎಸ್‌ವೈ ಗರಂ ಆಗಿದ್ದಾರೆ.

ಅವನು ಯಾವನ್ರಿ ಸಿಎಂ, ಪ್ರಧಾನಿ ಮೋದಿ ಬಗ್ಗೆ ಮಾತನಾಡೋಕ್ಕೆ ಎಂದಿರುವ ಯಡಿಯೂರಪ್ಪ, ಅವನಿಗೆ ಏನ್ ಯೋಗ್ಯತೆಯಿದೆ. ಏನ್ ನೈತಿಕ ಹಕ್ಕಿದ ಪ್ರಧಾನಿ ಬಗ್ಗೆ ಮಾತನಾಡೋಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಅವರ ಕಾಂಗ್ರೆಸ್ ಪಕ್ಷ ಒಡೆದು ಛಿದ್ರವಾಗಿದೆ. ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಮೂವರು ಒಟ್ಟಿಗೆ ಪ್ರಚಾರ ಮಾಡಲಿ ನೋಡೋಣ. ಒಬ್ಬಂಟಿಗಾನಾಗಿ ಸಿದ್ದರಾಮಯ್ಯ ಈಗ ಅಲೆಯುತಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ  ನಡೆಸಿದ್ದಾರೆ.

ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಆಗಮನ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ರಾಹುಲ್ ಹುಚ್ಚು ಹುಚ್ಚಾಗಿ ಮಾತಾಡ್ತಾನೆ. ಅವನು ಎಲ್ಲಿ ಹೋಗ್ತಾನೋ ಅಲ್ಲಿ ಕಾಂಗ್ರೆಸ್ ಸೋಲುತ್ತೆ. ರಾಹುಲ್ ಕರೆತಂದು ಹುಚ್ಚು ಹುಚ್ಚಾಗಿ ಮಾತನಾಡಿಸಲಿ. ಆಗ ನಮಗೆ ಉಪಯೋಗವಾಗುತ್ತೆ. ಇಲ್ಲೂ ಕಾಂಗ್ರೆಸ್ ಪಕ್ಷ ಸೋಲುತ್ತೆ. ನಮ್ಮದು ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲ್ತಾನೆ, ಬಾದಾಮಿಯಲ್ಲೂ ಸೋಲ್ತಾನೆ. ಸಿದ್ದರಾಮಯ್ಯ ಈ ರಾಜ್ಯ ಕೊನೆಯ ಕಾಂಗ್ರೆಸ್ ಮುಖ್ಯ ಮಂತ್ರಿ. ಲಿಂಗಾಯತ ಧರ್ಮ ಒಡೆದು ರಾಜಕೀಯ ಮಾಡಲು ಹೋಗಿದ್ದ ಸಿದ್ದರಾಮಯ್ಯಗೆ ಈಗ ರಿಬೌಂಡ್ ಆಗಿದೆ. ನಾನು ಮುಂದಿನ ತಿಂಗಳು 17ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದು ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com