ಮತ್ತೆ ಅಪ್ಪನಿಗೆ ತಕ್ಕ ಮಗನೆನಿಸಿಕೊಂಡ ದರ್ಶನ್‌ : ಅಪಘಾತದಿಂದ ನರಳಾಡುತ್ತಿದ್ದ ವ್ಯಕ್ತಿಗೆ ನೆರವಾದ ನಾಯಕ

ಮಂಡ್ಯ : ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದಿವಂಗತ ರೈತನಾಯಕ ಕೆ.ಎಸ್. ಪುಟ್ಟಣ್ಣಯ್ಯನವರ ಮಗ ದರ್ಶನ್ ಪುಟ್ಟಣ್ಣಯ್ಯ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ತಾಲೂಕು ಬಿ.ಹಟ್ನ ಗ್ರಾಮದ ಶಂಕರ್ (32) ಎಂಬುವವು ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದಿತ್ತು.
ಬಾರಿ ಮಳೆ, ಗಾಳಿಯ ನಡುವೆ ಸಾಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಯಾರು ಸಹಾಯಕ್ಕೆ ಬಾರದೆ ಶಂಕರ್ ರಸ್ತೆಯ ಪಕ್ಕ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದರು. ಈ ವೇಳೆ ಮಳೆಯ ನಡುವೆಯೇ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ದರ್ಶನ್
ಪ್ರಚಾರ ಕಾರ್ಯ ಕೈಬಿಟ್ಟು ಪ್ರಾಣ ಉಳಿವಿಗೆ ಮುಂದಾಗಿದ್ದಾರೆ. ತಮ್ಮ ಜೊತೆಯಿದ್ದ ಕಾರ್ಯಕರ್ತರ ಜೊತೆ ನರಳಾಡುತ್ತಿದ್ದ ಗಾಯಾಳುವನ್ನು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಲ್ಲದೆ, ವೈದ್ಯರ ಜೊತೆ ಮಾತನಾಡಿ ಸೂಕ್ತ ಚಿಕಿತ್ಸೆಗೆ ನೆರವಾಗಿದ್ದಾರೆ.

Leave a Reply

Your email address will not be published.