ಹಿಂದೂ ಹೆಣ್ಮಕ್ಳಳ ಮತಾಂತರಕ್ಕೆ ಮಸೀದಿಯಲ್ಲಿ ರೇಟ್‌ ಫಿಕ್ಸ್ ಮಾಡ್ತಾರಂತೆ….ಹೀಗಂದಿದ್ಯಾರು ?

ಕೊಪ್ಪಳ : ಹಿಂದೂ ಹೆಣ್ಣಮಕ್ಕಳ ಮತಾಂತರ ಮಾಡಲು ಮಸೀದಿಗಳಲ್ಲಿ ರೇಟ್ ಫಿಕ್ಸ್ ಮಾಡುತ್ತಾರೆ.  ಬ್ರಾಹ್ಮಣರಿಗೆ 5 , ಕ್ಷತ್ರಿಯರಿಗೆ 4 ಲಕ್ಷ, ಕುರುಬರಿಗೆ 3.5 ಲಕ್ಷ, ವಾಲ್ಮಿಕಿ ಸಮುದಾಯದವರಿಗೆ 3 ಲಕ್ಷ  ಫಿಕ್ಸ್ ಮಾಡಿದ್ದಾರೆ ಎಂದು ಕೋಮು ಪ್ರಚೋದನೆ ಮಾಡುವಂತೆ ಚೈತ್ರ ಕುಂದಾಪುರ ಭಾಷಣ ಮಾಡಿದ್ದಾರೆ.

ಕೊಪ್ಪಳದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇಕ್ಬಾಲ್ ಅನ್ಸಾರಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಬಿಜಿನೆಸ್ ಮಾಡ್ತಾರೆ, ಡೀಲ್ ಮಾಡ್ತಾರೆ ಎಂದಿದ್ದಾರೆ. ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಂತೆ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸ್ಥಳಕ್ಕಾಗಮಿಸಿದ ಇಕ್ಬಾಲ್‌ ಅನ್ಸಾರಿ ಅವರ ಕಾರಿನ ಮೇಲೆ ದಾಳಿ ನಡೆಸಿ, ಕಾರಿನ ಗಾಜನ್ನು ಪುಡಿಗೊಳಿಸಿದ್ದಾರೆ.

ಚೈತ್ರ ಕುಂದಾಪುರ ಅನೇಕ ದಿನ ಗಳಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೋಮು ದ್ವೇಷದ ಭಾಷಣ ಮಾಡುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಚೈತ್ರಾ ಗಡಿಪಾರಿಗೆ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com