ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಮೋದಿ ಸರ್ಕಾರದ ಕೈ ಬಲಪಡಿಸಿ : ಅಮಿತ್ ಶಾ

ಕೋಲಾರ ; ರಾಜ್ಯದ ಎಲ್ಲಾ ಕಡೆ ಓಡಾಡಿದ್ದೇನೆ, ಮೇ.15 ರ ಮಧ್ಯಾಹ್ನದ ನಂತ್ರ ರಾಜ್ಯಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಐದು ವರ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನು ನಡೆದಿಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದದಲ್ಲಿ ನಂಬರ್ ಒನ್ ಆಗಿದೆ. ದೇಶದಲ್ಲಿ ಮನಮೋಹನ್ ಸಿಂಗ್ ಸರ್ಕಾರಲ್ಲಿನ ಭ್ರಷ್ಟಾಚಾರ ಮುಚ್ಚಲು ಲಾಲು ಪ್ರಸಾದ್ ಯಾದವ್ ಬೆಂಬಲ ಪಡೆದಿದ್ದರು. ಈಗಲೂ ಸಹ ಕಾಂಗ್ರೆಸ್‌ಗೆ ಅವರ ಸಂಬಂಧ ಇದೆ. ಅವರನ್ನು ಭೇಟಿಯಾಗಲು ಈಗಲೂ ಹೋಗುತ್ತಾರೆ ಎಂದಿದ್ದಾರೆ.

ರಾಹುಲ್ ಗಾಂಧಿಯದ್ದು ಎರಡು ಮುಖಗಳಿವೆ. ಅಧಿಕಾರ ಇದ್ದಾಗ ನಿರಂತರ ಭ್ರಷ್ಟಾಚಾರದಲ್ಲಿ ಇದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಈಗ ರಾಜ್ಯಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ  ಬಾದಾಮಿಯಲ್ಲಿ ಗೆಲ್ಲುತ್ತೇನೆ ಎಂದು ಚಾಮುಂಡೇಶ್ವರಿಯಿಂದ ಓಡಿ ಹೋಗಿದ್ದಾರೆ. ಆದರೆ ಅಲ್ಲಿ ಶ್ರೀರಾಮುಲು ಸಿದ್ದರಾಮಯ್ಯ ಗೆಲ್ಲಲು ಬಿಡಲ್ಲ. ಬೆಂಗಳೂರಿನ ಅಭಿವೃದ್ಧಿ ಟ್ರಾಫಿಕ್ ಜಾಮ್ ನಲ್ಲಿದೆ. ಹ್ಯಾರಿಸ್‌, ಜಾರ್ಜ್‌, ರೋಷನ್ ಬೇಗ್ ರವರ ಕೈನಲ್ಲಿ ಬೆಂಗಳೂರು ಇದೆ. ಅದನ್ನ ತಪ್ಪಿಸಲು ಬಿಜೆಪಿ ಸರ್ಕಾರ ಬರಬೇಕಿದೆ‌. ಇದಕ್ಕಾಗಿ ನರೇಂದ್ರ ಮೋದಿ ಸರ್ಕಾರದ ಕೈ ಬಲ ಪಡಿಸಿ ಎಂದು ಅಮಿತ್ ಶಾ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com