ರಾಜ್ಯ ಬಿಜೆಪಿ ನಾಯಕರು ನಿಶ್ಯಕ್ತರಾಗಿದ್ದಕ್ಕೆ ಮೋದಿ ದೆಹಲಿಯಿಂದ ಟಾನಿಕ್‌ ತಂದಿದ್ದಾರೆ ಅನ್ಸುತ್ತೆ : ಖರ್ಗೆ ಲೇವಡಿ

ಕಲಬುರ್ಗಿ :  ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರವಾಸ ಮಾಡಿದರೆ ಯಾವುದೇ ಪರಿಣಾಮ ಬೀರೋದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದೇವೆ. ಹೀಗಾಗಿ, ನಮಗೆ ಜನರ ಬಳಿ ಹೋಗಿ ಮತ ಕೇಳುವ ಹಕ್ಕಿದೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರು ನಿಶಕ್ತರಾಗಿದ್ದಾರೆ. ಅದಕ್ಕಾಗಿಯೇ ಮೋದಿ ಅವರು ದೆಹಲಿಯಿಂದ ಟಾನಿಕ್ ತರ್ತಿದ್ದಾರೆ ಅಂತ ಅನಿಸುತ್ತದೆ ಎಂದು ಖರ್ಗೆ ಲೇವಡಿ ಮಾಡಿದ್ದಾರೆ. ಅವರು ಯಾವ ಟಾನಿಕ್ ತರ್ತಿದ್ದಾರೆ ನೋಡ್ತೀವಿ. ನಂತರ ಅದಕ್ಕೆ ನಾವ್ಯಾವ ಟಾನಿಕ್ ಕೊಡಬೇಕು ಎಂಬುದನ್ನು ಆಲೋಚನೆ ಮಾಡುತ್ತೇವೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com