ಶೋಭಕ್ಕಂಗೆ ಟಿಕೆಟ್ ಸಿಗದ ಕಾರಣ ಯಡಿಯೂರಪ್ಪಂಗೆ ಮೆಂಟಲ್‌ ಶಾಕ್ ಆಗಿದೆ : CM ಇಬ್ರಾಹಿಂ

ಗದಗ : ಐದು ವರ್ಷ ನುಡಿದಂತೆ ನಡೆದಿದ್ದೇವೆ. ನಾವು ಐದು ವರ್ಷ ನಡೆದಿದ್ದನ್ನು ನುಡಿಯಲು ನಿಮ್ಮೆದುರು ಬಂದಿದ್ದೇವೆ. ಸಾವಿರಾರು ಮಂದಿಗೆ ದಾಸೋಹ ಕೊಟ್ಟರೆ ಅದು ದೊಡ್ಡ ಮಠ. ಆದ್ರೆ ಸಿದ್ದರಾಮಯ್ಯ ಅವ್ರ ಮಠದಾಗ ಕೋಟ್ಯಾಂತರ ಜನರಿಗೆ ದಾಸೋಹ ನೀಡಲಾಗಿದೆ ಎಂದು  ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಗದಗದಲ್ಲಿ ಪ್ರಚಾರದ ವೇಳೆ ಮಾತನಾಡಿದ ಇಬ್ರಾಹಿಂ, ಪ್ರಧಾನಿಯವರ ಬೇಟಿ ಬಚಾವೋ, ಬೇಟಿ ಪಡಾವೋ ಕೇವಲ ಭಾಷಣಕ್ಕಷ್ಟೆ ಸೀಮಿತ. ಜೈಲು, ಬೇಲಿನ ಜನರನ್ನು ಕಟ್ಟಿಕೊಂಡು ಕರ್ನಾಟಕದ ಟಗರಿನ ಮುಂದೇ ನಿಮ್ಮ ಆಟ ನಡೆಯಲ್ಲ. ಮೋದಿಯವರೇ ನಿಮಗೆ ಈ  ಟಗರಿನ ಸಾಮರ್ಥ್ಯ ಗೊತ್ತಿಲ್ಲ. ಕಳಂಕ ರಹಿತ ಆಡಳಿತ ಸಿಎಂ ಸಿದ್ದರಾಮಯ್ಯರದ್ದು. ನಿಮ್ಮ ಡೊಂಕನ್ನು ನೀವು ತಿದ್ದಿಕೊಳ್ಳಿ ಎಂದಿದ್ದಾರೆ.

ಜಾತಿ ಒಡೆದವರು ಬಿಜೆಪಿಗರು. ಸಂವಿಧಾನದಿಂದಲೇ ನಮಗೆ ಓಟು ಹಾಗೂ ಸಮಾನತೆಯ ಹಕ್ಕು ಸಿಕ್ಕಿದೆ. 11 ನೇ ಶತಮಾನದಲ್ಲಿ ಬಸವಣ್ಣ ಕೂಗಿದ್ದನ್ನೇ 2013 ರಲ್ಲಿ ಸಿದ್ದರಾಮಯ್ಯ ಕೂಗಿದ್ರು.  ನೀವು ಅಸೆಂಬ್ಲಿಯಲ್ಲಿ ಹೋಗಿ ಏನು ಮಾಡಿದ್ರಿ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ.  ಕಮಲಕ್ಕೆ ಸೂರ್ಯೋದಯ ಚಿಂತೆ, ಸಿದ್ದರಾಮಯ್ಯಗೆ ಜನ್ರ ಚಿಂತೆ. ಯಡಿಯೂರಪ್ಪಗೆ ಶೋಭಕ್ಕನ ಚಿಂತೆ. ಶೋಭಾಗೆ ಟಿಕೆಟ್ ಸಿಗದ ಕಾರಣ ಯಡಿಯೂರಪ್ಪಗೆ ಮೆಂಟಲ್ ಶಾಕ್ ಆಗಿದೆ ಎಂದಿದ್ದಾರೆ. ಅಲ್ಲದೆ ಮತ್ತೆ  ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸೋದು ಶತಸಿದ್ಧ ಎಂದಿರುವ ಇಬ್ರಾಹಿಂ, ಪ್ರಮಾಣ ವಚನ ಸ್ವೀಕಾರಕ್ಕೆ ಬಿಎಸ್ವೈಗೆ ಆಹ್ವಾನ ನೀಡಿದ್ದಾರೆ.

ಅಬ್‌ ಬಿಜೆಪಿಕೋ ಸಬಕ್ ಸಿಕಾನಾ ಹೋಗ, ಹಿಂದೂ ಮುಸಲ್ಮಾನ್ ಏಕ್ ಮಾಕೇ ಬಚ್ಚೆ ಜೈಸೇ ರಹೆಂಗೆ.ಮೋದಿಕೋ ಹಮ್ ಕಬಿಬೀ ಡರೆಂಗೆ ನಹಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com