ಅಲಿಬಾಬಾ ಹಾಗೂ ಅರವತ್ತು ಮಂದಿ ಚೋರರೆಲ್ಲ ಬಿಜೆಪಿಯಲ್ಲೇ ಇದ್ದಾರೆ : ಸಿದ್ದರಾಮಯ್ಯ
ಗದಗ : ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ ಪರ ಸಿಎಂ ಸಿದ್ದರಾಮಯ್ಯ ಇಂದು ಮತಯಾಚನೆ ಮಾಡಿದ್ದಾರೆ. ಕೇಂದ್ರದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಪ್ರಧಾನಿಯಾಗಿ ನಾಲ್ಕು ವರ್ಷ ಆಯಿತು. ಯಾವುದೇ ಕೆಲಸ ಆಗಿಲ್ಲ. ನಾನು ನಿಮ್ಮ ಆಶೀರ್ವಾದ ಬಳಿ ಐದು ವರ್ಷ ಪೂರ್ಣಾವಧಿ ಸಿಎಂ ಆಗಿದ್ದೇನೆ ಎಂದಿದ್ದಾರೆ.
ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೋಲ್ತಾರೆ ಅಂತ ಮೋದಿ ಕರೆ ತಂದಿದ್ದಾರೆ. ರಾಜ್ಯದಲ್ಲಿ ಮೋದಿ ಮ್ಯಾಜಿಕ್ ಮಾಡೋಕೆ ಆಗಲ್ಲ. ಅಚ್ಛೆ ದಿನ್ ಆಯೇಗಾ ಅಂದಿದ್ರು ಎಲ್ಲಿದೆ ಅಚ್ಛೆ ದಿನ್. ಬಡವರ, ರೈತರ ಕಷ್ಟಕ್ಕೆ ಪರಿಹಾರ ಸಿಕ್ಕಿದೆಯಾ. ಅಭಿತಕ್ ಅಚ್ಛೆ ದಿನ್ ನಹಿ ಆಯಾಹೈ, ಕೇಂದ್ರ ಸರ್ಕಾರ ಏನು ಮಾಡಿದೆ ಅಂತ ಮೊದಲು ಹೇಳಲಿ ಎಂದಿದ್ದಾರೆ.
ಸಿಲಿಂಡರ್ ಬೆಲೆ 350 ರೂಪಾಯಿ ಹೆಚ್ಚಾಗಿದೆ. ಪೆಟ್ರೋಲ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಾದ್ರು, ಭಾರತದಲ್ಲಿ ಬೆಲೆ ಹೆಚ್ಚಾಗಿದೆ.
ಪೆಟ್ರೋಲ್ ಲೀಟರ್ಗೆ 30 ಲೀಟರ್ ಆಗಬೇಕಿತ್ತು. ಮನ್ ಕಿ ಬಾತ್ ಮಾತಾಡಿದ್ದೊಂದೇ ಬಂತು. 56 ಇಂಚಿನ ಎದೆ ಇದ್ರೆ ಸಾಲದು 56 ಇಂಚಿನ ಹೃದಯ ಇರಬೇಕು. ಮೋದಿ ದೇಶದ ಮಹಾನ್ ಸುಳ್ಳುಗಾರ. ಪಕ್ಕದಲ್ಲೇ ಯಡಿಯೂರಪ್ಪನ್ನ ಇಟ್ಟುಕೊಂಡು ಮಾತಾಡೋಕೆ ನಾಚಿಕೆಯಾಗಲ್ವ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲಿಬಾಬಾ ಅರವತ್ತು ಮಂದಿ ಚೋರರೆಲ್ಲರೂ ಕರ್ನಾಟದ ಬಿಜೆಪಿಯಲ್ಲೇ ಇರುವುದಾಗಿ ಹೇಳಿದ್ದಾರೆ.