ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ ಯತ್ನ : ರಾಜಕೀಯ ವ್ಯಕ್ತಿಗಳಿಂದ ನಡೀತು ಹೈಡ್ರಾಮ

ಚಿತ್ರದುರ್ಗ : ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತ ಬಾಲಕನೋರ್ವ ಅತ್ಯಚಾರಕ್ಕೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ.

ಆರೋಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ಕೆಲ ರಾಜಕೀಯ ಮುಖಂಡರು ಹೈಡ್ರಾಮ ಮಾಡಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.  ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಚಾಕಲೇಟ್ ಆಸೆ ತೋರಿಸಿ ಬಾಲಕನೋರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆರೋಪಿ ಬಾಲಕನನ್ನು ವಶಕ್ಕೆ ಪಡೆದಿರುವ ಹಿರಿಯೂರು ನಗರ ಪೋಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ, ಆದರೆ ಸುಮ್ಮನಿರದ ಬಾಲಕಿಯ ಸಂಬಂದಿಕರು ಆರೋಪಿ ಬಾಲಕನ್ನು ತಮಗೆ ಒಪ್ಪಿಸುವಂತೆ ಹಿರಿಯೂರು ನಗರ ಪೋಲಿಸ್ ಠಾಣೆ ಎದುರು ಪ್ರತಿಭಟನೆಗೆ ಮುಂದಾಗಿ ಬಾಲಕನ ಸಂಬಂಧಿಕರ ವಿರುದ್ಧ ಗಲಾಟೆ ನಡೆಸಿದ್ದಾರೆ, ಗಲಾಟೆಯನ್ನ ನಿಲ್ಲಿಸಲು ಮುಂದಾದ ಪೋಲೀಸ್ ಪೇದೆಗಳಿಬ್ಬರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಲಾಠಿಚಾರ್ಜ್ ನಡೆಸಿರುವುದಾಗಿ ತಿಳಿದುಬಂದಿದೆ.

ಬಳಿಕ ಅಸ್ವಸ್ಥ ಬಾಲಕಿಯನ್ನ ಆರೋಗ್ಯ ತಪಾಸಣೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.  ಜಿಲ್ಲಾ ಮಹಿಳಾ ಕಂಗ್ರೆಸ್ ಅಧ್ಯಕ್ಷೆ ಮುನಿರಾ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಎಸ್ಪಿ ಲಕ್ಷ್ಮಣ್ ಅರಸಿದ್ದಿ ಪ್ರಕರಣ ಸಂಬಂಧ ದೂರು ದಾಖಲಿಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದೇವೆ. ತನಿಕೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ದಯವಿಟ್ಟು ಪ್ರತಿಭಟನೆ ಮಾಡಬೇಡಿ ಎಂದು ಮೈಕ್ ಹಿಡಿದು ಮನವಿ ಮಾಡಿದರೂ ಸುಮ್ಮನಾಗದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಮುನಿರಾ ಪೋಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಆಕ್ರೋಶಕ್ಕೆ ಒಳಗಾಗಿ ಆಸ್ಪತ್ರೆ ಮುಂಬಾಗದಲ್ಲಿ ನಿಲ್ಲಿಸಿದ್ದ ಅಂಬುಲೆನ್ಸ್ ಸೇರಿದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಮೇಲೂ ಕಲ್ಲು ತೂರಿ ದಾಂಧಲೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಅನೇಕರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com