ಮತ್ತದೇ ರಾಗ ಅದೇ ಹಾಡು…ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಪೋಷಕರೇ ಕಾರಣ ಎಂದ BJP ಶಾಸಕ

ಲಖನೌ : ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಪೋಷಕರೇ ಕಾರಣ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿದ್ದು, ವಿವಾದ ಸೃಷ್ಠಿಯಾಗಿದೆ.
ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸುರೇಂದ್ರ ಸಿಂಗ್‌ ಎರಡು ಮೂರು ಮಕ್ಕಳ ತಾಯಿಯ ಮೇಲೆ ಯಾರೂ ಅತ್ಯಾಚಾರವೆಸಗುವುದಿಲ್ಲ ಎಂದಿದ್ದರು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು,  ಪೋಷಕರು ಮಕ್ಕಳನ್ನು ಹೆಚ್ಚು ಸುತ್ತಾಡಲು ಬಿಡುತ್ತಾರೆ. ಅಲ್ಲದೆ ಮಕ್ಕಳ  ಕೈಗೆ ಮೊಬೈಲ್‌ ನೀಡಲಾಗುತ್ತಿದೆ. ಮಕ್ಕಳ ಕೈಗೆ ಮೊಬೈಲ್‌ ಕೊಡಬೇಡಿ ಎಂದಿದ್ದಾರೆ.
ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಮಕ್ಕಳ ತಂದೆ-ತಾಯಿಯರೇ ಕಾರಣ. ಏಕೆಂದರೆ ಅವರು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. 15 ವರ್ಷದವರೆಗೆ ಮಕ್ಕಳ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸಬೇಕು. ಇದು ಪೋಷಕರ ಕರ್ತವ್ಯ. ಆದರೆ ಈಗಿನ ಪೋಷಕರು ಹಾಗೆ ಮಾಡುವುದಿಲ್ಲ. ಮಕ್ಕಳನ್ನು ಮುಕ್ತವಾಗಿ ಬಿಡುತ್ತಾರೆ. ಅದಕ್ಕೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com