Birthday Girl ಅನುಷ್ಕಾ ಬಗ್ಗೆ ಕೊಹ್ಲಿ ಮೆಚ್ಚುಗೆಯ ಮಾತು : ವಿರಾಟ್ ಹೇಳಿದ್ದೇನು..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಂಗಳವಾರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 30ನೇ ವಸಂತಕ್ಕೆ ಕಾಲಿರಿಸಿದ ಪತ್ನಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ಜನ್ಮ ದಿನದಂದು ನೆಚ್ಚಿನ ಮಡದಿ ಅನುಷ್ಕಾ ಬಗ್ಗೆ ವಿರಾಟ್ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಟ್ವೀಟ್ ಮಾಡಿರುವ ಕೊಹ್ಲಿ ‘ ಹ್ಯಾಪಿ ಬರ್ತ್ ಡೇ ಮೈ ಲವ್, ನಾನು ಕಂಡ ಅತ್ಯಂತ ಸಕಾರಾತ್ಮಕ ಹಾಗೂ ಪ್ರಾಮಾಣಿಕ ವ್ಯಕ್ತಿ ನೀನು, ಲವ್ ಯೂ ‘ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಳೆದ ವರ್ಷ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾಗಿದ್ದರು. ಶ್ಯಾಂಪೂ ಒಂದರ ಜಾಹೀರಾತಿನ ಶೂಟಿಂಗ್ ವೇಳೆ ಇಬ್ಬರ ಪರಿಚಯವಾಗಿ, ನಂತರ ಪ್ರೇಮಾಂಕುರವಾಗಿತ್ತು. ವಿರಾಟ್ – ಅನುಷ್ಕಾ ಜೋಡಿಯನ್ನು ಅಭಿಮಾನಿಗಳು ವಿರುಷ್ಕಾ ಎಂದೇ ಕರೆಯುತ್ತಾರೆ.

Leave a Reply

Your email address will not be published.