ಹುಟ್ಟುಹಬ್ಬದ ಸಂಭ್ರಮದಲ್ಲಿ JK : ಬಿಗ್ ಬಾಸ್ ಸ್ಪರ್ಧಿಗಳಿಂದ ನಟನಿಗೆ ಶುಭಾಶಯ

ಜೆಕೆ ಖ್ಯಾತಿಯ ನಟ, ಬಿಗ್ ಬಾಸ್ ಸೀಸನ್ – 5 ಸ್ಪರ್ಧಿ ಜಯರಾಮ್ ಕಾರ್ತಿಕ್ ಮಂಗಳವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಸೀಸನ್ – 5 ನಲ್ಲಿ ಸ್ಪರ್ಧಿಗಳಾಗಿದ್ದ ಅನುಪಮಾ ಗೌಡ, ಶ್ರುತಿ ಪ್ರಕಾಶ್ ಜೆಕೆಗೆ ಹುಟ್ಟು ಹಬ್ಬದಂದು ಶುಭಾಶಯ ಕೋರಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಜೆಕೆ ಜೊತೆಗಿನ ಫೋಟೊ ಪೋಸ್ಟ್ ಮಾಡಿರುವ ಅನುಪಮಾ ಗೌಡ ‘ ತನ್ನ ಸುತ್ತಲಿರುವ ಜನರನ್ನು ಯಾವಾಗಲೂ ಸಂತೋಷವಾಗಿಡುವಂತಹ ವ್ಯಕ್ತಿತ್ವವನ್ನು ಜೆಕೆ ಹೊಂದಿದ್ದಾರೆ, ಜೀವನದಲ್ಲಿ ತುಂಬಾ ಯಶಸ್ಸು ಸಿಗಲಿ, ಸಂತೋಷವಾಗಿರಲಿ ‘ ಎಂದು ಹಾರೈಸಿದ್ದಾರೆ.

ಬರ್ತ್ ಡೇ ಬಾಯ್ ಜೆಕೆಯೊಂದಿಗಿರುವ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಶ್ರುತಿ ಪ್ರಕಾಶ್, ‘ ಅತ್ಯಂತ ವಿನಮ್ರ ವ್ಯಕ್ತಿತ್ವ ಹೊಂದಿರುವ ಜೆಕೆಗೆ ಹ್ಯಾಪಿ ಬರ್ತ್ ಡೇ, ಅವರು ಅದ್ಭುತ ಹಾಸ್ಯಪ್ರಜ್ಞೆಯನ್ನು ಹೊಂದಿದ್ದಾರೆ. ಜೆಕೆ ಒಬ್ಬ ಅದ್ಭುತ ನಟ, ಒಳ್ಳೆಯ ಸ್ನೇಹಿತ, ಹೃದಯವಂತ ‘ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com