ಯಡಿಯೂರಪ್ಪನವರ ಸ್ಥಿತಿ ಹಳೇ 500, 1000ರೂ ತರ ಆಗೋಗಿದೆ : CM ಇಬ್ರಾಹಿಂ

ಯಾದಗಿರಿ : ಬಿಜೆಪಿಯಲ್ಲಿ ಯಡಿಯೂರಪ್ಪ ರ ಸ್ಥಿತಿ ಹಳೆ 500 ರೂಪಾಯಿ 2000ಸಾವಿರ ನೋಟುಗಳಂತೆ ಆ ಎಂದು ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ಬಸವಣ್ಣನವರು ನುಡಿದಂತೆ ನಡೆ ಎಂದು ಹೇಳಿದ್ದಾರೆ ಆದರೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನವರ ಸರ್ಕಾರ ಶಾಲಾ ಕಾಲೇಜು ಮಕ್ಕಳಿಗೆ ಪ್ರೀ ಪಾಸ್ ಮಾಡಿದೆ. ವಾರದಲ್ಲಿ 5 ದಿನಾ ಶಾಲಾ ಮಕ್ಕಳಿಗೆ ಹಾಲು ಕೊಡ್ತಾ ಇದೆ. ಶಾಲಾ ಮಕ್ಕಳಿಗೆ ಉಚಿತ ಶೊ ಕೊಟ್ಟಿದಿವಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಿದಿವಿ. ನೂರಾರು ಭಾಗ್ಯಗಳ ಸರ್ಕಾರ ಯಾವುದಾದ್ರೂ ಇದ್ರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ.ಇಬ್ರಾಹಿಂ ಹೇಳಿದ್ರು.

2 ಲಕ್ಷ ಕೃಷಿ ಹೊಂಡ ತೆಗೆಸಿದ್ದೇವೆ, ರೈತರಿಗೆ ಸಾಲ ಕೊಟ್ಟಿದ್ದು ನಮ್ಮ ಸರ್ಕಾರ. ಎಡಿಯೂರಪ್ಪ ಇಂತಹ ಸವಲತ್ತು ಕೊಟ್ಟಿದ್ರಾ ಎಂದು ಪ್ರಶ್ನಿಸಿದರು.ಈ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಗನಿಗೂ ಟಿಕೆಟ್ ಇಲ್ಲ, ಶೋಭಕ್ಕನಿಗೂ ಟಿಕೆಟ್ ಇಲ್ಲ. ಕರ್ನಾಟಕದಲ್ಲಿ ಬಿಜೆಪಿಯ ಆಟ ನಡೆಯುತ್ತಿಲ್ಲ, ಎಡಿಯೂರಪ್ಪನವರಿಗೆ ನಾವು ಏನು ಅಂತ ತಿಳಿಯಲಿದೆ. ಮುಂದಿನ 5 ವರ್ಷ ಅಲ್ಲ ಮುಂದಿನ 50 ವರ್ಷದವರಿಗೊ ಕಾಂಗ್ರೆಸ್ ಸರ್ಕಾರ ಇರುತ್ತೆ ಎಂದಿದ್ದಾರೆ.

ರಾಜ್ಯದಲ್ಲಿ ಹಿಂದೂ ಮುಸ್ಲಿಂ ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತಿದ್ದಾರೆ. ಆದರೆ ಧರ್ಮ-ಧರ್ಮಗಳ ಮದ್ಯೆ ಜಗಳ ಹಚ್ಚುವಂತಹ ಕೆಲಸ ಬಿಜೆಪಿ ಮಾಡುತ್ತಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com