ಹತಾಶರಾಗಿರೋ ಬಿಜೆಪಿಗರು ಕೂಡಲಸಂಗಮಕ್ಕೆ ಹೋಗಿ ಓಂ ನಮಃ ಅಂತ ಜಪ ಮಾಡಲಿ : CM ಇಬ್ರಾಹಿಂ ವ್ಯಂಗ್ಯ

ಯಾದಗಿರಿ :  ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದ್ದು, ಯಾದಗಿರಿಯಲ್ಲಿಂದು ಸಿಎಂ ಇಬ್ರಾಹಿಂ ಪ್ರಚಾರ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ಬದಲಾವಣೆ ಮಾಡಿದ್ರೆ ದೇಶದಲ್ಲಿ ಕ್ರಾಂತಿ ನಡೆಯುತ್ತದೆ ಎಚ್ಚರ.  ದೇಶದಲ್ಲಿ ಬಿಜೆಪಿಗೆ ಒಗ್ಗಟ್ಟು ಬೇಕಾಗಿಲ್ಲ, ಸಂಘ ಪರಿವಾರ ಬೇಕಾಗಿದೆ. ಬಿಜೆಪಿ ಗೆಲ್ಲಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ.  ಬಾದಾಮಿಯಲ್ಲಿ ಸಿಎಂ ಸೋಲಿಸಲು ಮೋದಿಯಂತಹವರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಶೋಭಾ ಹಾಗೂ ಇತರರಿಗೂ ಟಿಕೆಟ್ ಕೈತಪ್ಪಿದ್ದಕ್ಕಾಗಿ ಬಿಜೆಪಿಯವರು ಹತಾಶರಾಗಿದ್ದಾರೆ. ಇವರೆಲ್ಲ ಹೋಗಿ ಕೂಡಲ ಸಂಗಮದಲ್ಲಿ ಹೊಗಿ ಓಂ ನಮ: ಅಂತ ಐದು ವರ್ಷ ಜಪ ಮಾಡಿಲಿ ಎಂದು ವ್ಯಂಗ್ಯಮಾಡಿದ್ದಾರೆ. ರಾಜ್ಯದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತ ಸಿದ್ದ ಎಂದು ಇಬ್ರಾಹಿಂ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com