ಉದ್ಯೋಗಕ್ಕಾಗಿ ಯುವಜನರು : ಮೋದಿಗೆ ಪ್ರಶ್ನೆ ಕೇಳಲು ಹೊರಟ ಯುವಕರನ್ನು ಬಂಧಿಸಿದ ಪೊಲೀಸರು

ಬೆಂಗಳೂರು : ಒಂದು ವರ್ಷಕ್ಕೆ ಕೋಟಿ  ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಮಾತು ತಪ್ಪಿದ್ದು, ಯುವಕರು ಉದ್ಯೋಗವಿಲ್ಲದಂತೆ ಅಲೆದಾಡುತ್ತಿದ್ದಾರೆ. ಅಲ್ಲದೆ ಖಾಯಂ ಉದ್ಯೋಗವೇ ಇಲ್ಲದಂತೆ ಮಾಡುತ್ತಿರುವ ತಿದ್ದುಪಡಿಯನ್ನು ಮೋದಿ ಸರ್ಕಾರ ಜಾರಿಗೆ ತಂದಿದ್ದು, ಇದರ ವಿರುದ್ಧ ಉದ್ಯೋಗಕ್ಕಾಗಿ ಯುವಜನರು ವೇದಿಕೆ ಹೋರಾಟ ಆರಂಭಿಸಿದೆ.

ಹೊಸ ತಿದ್ದುಪಡಿ ಜಾರಿಯಿಂದಾಗಿ ಹೊಸ ಉದ್ಯೋಗ ಸೃಷ್ಠಿಯಾಗುವುದಿರಲಿ ಇರುವ ಉದ್ಯೋಗವೂ ನಷ್ಟವಾಗಿದೆ ಎಂದು ಯುವಜನರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಮೇ 1ರಂದು ಕಾರ್ಮಿಕ ದಿನಾಚರಣೆಯಾಗಿದ್ದು, ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಗಮನ ಸೆಳೆಯಲು ಉದ್ಯೋಗಕ್ಕಾಗಿ ಯುವಜನರು ವೇದಿಕೆ ಹೋರಾಟ ನಡೆಸಿದೆ.

ಇಂದು ಸಂಜೆ ನಾಲ್ಕು ಗಂಟೆಯಿಂದ ಮೈಸೂರಿನ ಟೌನ್‌ ಹಾಲ್ ಮುಂಭಾಗದ ಅಂಬೇಡ್ಕರ್‌ ಪ್ರತಿಮೆ ಬಳಿಯಿಂದ ಸಂತೇಮರಳ್ಳಿಗೆ ಅಹೋರಾತ್ರಿ ಕಾಲ್ನಡಿಗೆ ಜಾಥಾ ನಡೆಸಲು ಪ್ರಾರಂಭಿಸಿದ್ದರು. ಆದರೆ ಪ್ರತಿಭಟನೆಗೂ ಮುನ್ನವೇ ಪೊಲೀಸರು ಯುವಕರನ್ನು ಬಂಧಿಸಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಈ ಬಾರಿ ನಮ್ಮ ಪ್ರಶ್ನೆಗೆ ಅವರು ಉತ್ತರಿಸಲೇಬೇಕು. ಈ ಬಾರಿ ಯಾವುದೇ ಕಾರಣಕ್ಕೂ ಅವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಉದ್ಯೋಗಕ್ಕಾಗಿ ಯುವಜನರು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com