WATCH : ಅದ್ಭುತ ‘ಡೈವಿಂಗ್ ಕ್ಯಾಚ್’ ಪಡೆದ ಕೊಹ್ಲಿ : ಮೆಚ್ಚುಗೆ ಸೂಚಿಸಿದ ಪತ್ನಿ ಅನುಷ್ಕಾ..!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ತಂಡ 6 ವಿಕೆಟ್ ಸೋಲನುಭವಿಸಿತ್ತು. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಬಾರಿಸಿದ್ದರು, ಆದರೆ ತಂಡಕ್ಕೆ ಗೆಲುವನ್ನು ತಂದು ಕೊಡಲು ಸಾಧ್ಯವಾಗಿರಲಿಲ್ಲ.

ಬ್ಯಾಟಿಂಗ್ ಮಾತ್ರವಲ್ಲದೇ ವಿರಾಟ್, ಫೀಲ್ಡಿಂಗ್ ನಲ್ಲಿಯೂ ಮಿಂಚಿದರು. ಉಮೇಶ್ ಯಾದವ್ ಎಸೆತದಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬಾರಿಸಿದ ಚೆಂಡನ್ನು ಲಾಂಗ್ ಆನ್ ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ವಿರಾಟ್ ಅದ್ಭುತವಾಗಿ ಡೈವ್ ಮಾಡಿ ಕ್ಯಾಚ್ ಪಡೆದರು. ಈ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಅದ್ಭುತ ಕ್ಯಾಚ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.

 

Leave a Reply

Your email address will not be published.