ನಾನು ಕನ್ನಡಕ್ಕೆ ನೀಡಿದ ಕೊಡುಗೆ ಏನು ಅಂತ ಆ ಪ್ರತಾಪ್‌ ಸಿಂಹಂಗೆ ಗೊತ್ತೇನ್ರಿ : ಸಿದ್ದರಾಮಯ್ಯ

ವಿಜಯಪುರ : ಎಚ್ ಡಿಕೆ, ಶಾ ಭೇಟಿಯಾಗಿದ್ದರ ಬಗ್ಗೆ ನನಗೆ ಖಚಿತ ಮಾಹಿತಿ ಇದೆ. ಈ ಬಗ್ಗೆ ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಮಿತ್ ಶಾ ಜೈನ್ ಧರ್ಮದವರಾಗಿದ್ದು ಹಿಂದೂ ಅಂತ ಹೇಳ್ತಾರೆ. ಬಿಜೆಪಿಯವರು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ, ಜೆಡಿಎಸ್ ಇಬ್ಬರೂ ಆಡಳಿತಕ್ಕೆ ಬರಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅನಂತಮಾರ ಹೆಗಡೆಗೆ ಸಂಸ್ಕ್ರತಿ ಇಲ್ಲ, ಮನುಷ್ಯತ್ವ ಇಲ್ಲ.ಅವರ ಬಗ್ಗೆ ಮಾತಾಡದೆ ಇರುವುದೆ ಲೇಸು ಎಂದಿದ್ದಾರೆ.

ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂದು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಯಲ್ಲಿ ಐದು ಬಾರಿ ಗೆದ್ದಾಗ ಅಮಿತ್ ಶಾ ಬಂದಿದ್ರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಗೆದ್ದರೆ ನಾನೇ ಸಿಎಂ ಆಗ್ತೆನೆ ಎಂದು ಹೇಳೋಕಾಗಲ್ಲ. ಆದ್ರೆ ನನ್ನ ನೇತ್ರತ್ವದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ನಾನೆ ಸಿಎಂ ಆಗುವ ಸಾಧ್ಯತೆ ಇದೆ. ಅನಂತಕುಮಾರ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ತಪ್ಪಿಸಿದ್ದಾರೆ. ಲಿಂಗಾಯತ ಪ್ರತ್ಯೆಕ ಧರ್ಮದ ವಿಚಾರ ಇದೊಂದು ಇಶ್ಯೂ ಅಲ್ಲ. ಬಿಜೆಪಿಯವರು ಅದನ್ನು ಚುನಾವಣಾ ವಿಚಾರವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟರೆ ಬೇರೇನು ಇಲ್ಲ ಎಂದಿದ್ದಾರೆ.

ಮರಾಠಿ ಭಾಷೆ ಬರಲ್ಲ ಕ್ಷಮಿಸಿ ಎಂದು ಸಿಎಂ ಹೇಳಿದ ವಿಚಾರ ಸಂಬಂಧ ಮಾತನಾಡಿದ ಸಿಎಂ, ನನಗೆ ಮರಾಠಿ ಬರಲ್ಲ ಕ್ಷಮಿಸಿ ಎಂದು ಕೇಳಿಲ್ಲ. ನನಗೆ ಮರಾಠಿ ಬರೋದಿಲ್ಲ ಅಂತಾ ಹೇಳಿದ್ದೇನೆ ಅಷ್ಟೇ. ನನ್ನ ಕನ್ನಡದ ಬಗ್ಗೆ ಪ್ರತಾಪ್ ಸಿಂಹಗೆ ಏನು ಗೊತ್ತು? ನಾನು ಕನ್ನಡಕ್ಕೆ ನೀಡಿದ ಕೊಡುಗೆ ಬಗ್ಗೆ ಪ್ರತಾಪ್ ಸಿಂಹಗೆ ಗೊತ್ತಿದೆಯಾ? ನನ್ನ ರಾಜಕೀಯ ಆರಂಭವಾಗಿದ್ದು ಕನ್ನಡ ಕಾವಲು ಸಮಿತಿಯಿಂದ ಪ್ರತಾಪ್ ಸಿಂಹರಿಂದ ನಾನು ಕನ್ನಡದ ಪಾಠ ಕಲಿಯಬೇಕಿಲ್ಲ ಎಂದು ಸಂಸದ ಪ್ರತಾಪ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com