31ನೇ ವಸಂತಕ್ಕೆ ಕಾಲಿಟ್ಟ ರೋಹಿತ್ : ಹಿಟ್‍ಮ್ಯಾನ್ ಗೆ ಸೆಹ್ವಾಗ್ Special ಶುಭಾಶಯ..!

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸೋಮವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 3 ದ್ವಿಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಅವರದ್ದಾಗಿದೆ. ಸೊಗಸಾದ ಟೈಮಿಂಗ್ ಹೊಂದಿರುವ ಹಿಟ್ ಮ್ಯಾನ್ ರೋಹಿತ್, ಸಿಕ್ಸರ್, ಬೌಂಡರಿಗಳನ್ನು ಬಾರಿಸುತ್ತಿದ್ದರೆ ಎದುರಾಳಿ ತಂಡದ ಬೌಲರ್ ಗಳ ಪಾಡು ಹೇಳತೀರದು.

ಸಾಮಾಜಿಕ ಜಾಲತಾಣದಲ್ಲಿ ಅಬಿಮಾನಿಗಳಿಂದ ರೋಹಿತ್ ಶರ್ಮಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಭಾರತದ ಮಾಜಿ ಆರಂಭಿಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಬರ್ತ್ ಡೇ ಬಾಯ್ ರೋಹಿತ್ ಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Image result for sehwag rohith birthday 31 wish

ಟೈಗರ್ ಜಿಂದಾ ಹೈ ಚಿತ್ರದ ಸಲ್ಮಾನ್ ಖಾನ್ ಅವರಂತೆ ಎಡಿಟ್ ಮಾಡಲಾಗಿರುವ ರೋಹಿತ್ ಫೋಟೊವೊಂದನ್ನು ಹಂಚಿಕೊಂಡಿರುವ ಸೆಹ್ವಾಗ್, ‘ ಟ್ಯಾಲೆಂಟ್ ಜಿಂದಾ ಹೈ ‘ ಎಂದು ತಮಾಷೆಯಾಗಿ ಶುಭಾಶಯ ಕೋರಿದ್ದಾರೆ.

 

One thought on “31ನೇ ವಸಂತಕ್ಕೆ ಕಾಲಿಟ್ಟ ರೋಹಿತ್ : ಹಿಟ್‍ಮ್ಯಾನ್ ಗೆ ಸೆಹ್ವಾಗ್ Special ಶುಭಾಶಯ..!

Leave a Reply

Your email address will not be published.

Social Media Auto Publish Powered By : XYZScripts.com