IPL : ಕೆಕೆಆರ್ ತಂಡಕ್ಕೆ 6 ವಿಕೆಟ್ ಗೆಲುವು : RCBಗೆ ತವರಿನಲ್ಲಿ ಮುಖಭಂಗ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 6 ವಿಕೆಟ್ ಗೆಲುವು ಸಾಧಿಸಿದೆ. ಕಳಪೆ ಬೌಲಿಂಗ್ & ಫೀಲ್ಡಿಂಗ್ ಪ್ರದರ್ಶಿಸಿದ ಆರ್ ಸಿಬಿ ತವರಿನಲ್ಲಿ ಮತ್ತೆ ಸೋಲು ಕಂಡಿದೆ.

ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಬ್ಯಾಟ್ ಮಾಡಿ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 175 ರನ್ ಮೊತ್ತ ಸೇರಿಸಿತು.   ಆರ್ ಸಿಬಿ ಪರವಾಗಿ ನಾಯಕ ವಿರಾಟ್ ಕೊಹ್ಲಿ 68 ಹಾಗೂ ಬ್ರೆಂಡನ್ ಮೆಕ್ಕಲಂ 38 ರನ್ ಗಳಿಸಿದರು.

ಚೇಸ್ ಮಾಡಲಿಳಿದ ಕೆಕೆಆರ್ 19.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ಸೇರಿಸಿ ಜಯ ಸಾಧಿಸಿತು. ಕೆಕೆಆರ್ ಪರವಾಗಿ ಕ್ರಿಸ್ ಲಿನ್ ಅಜೇಯ 62 ಹಾಗೂ ರಾಬಿನ್ ಉತ್ತಪ್ಪ 36 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

7 ಪಂದ್ಯಗಳ ಪೈಕಿ 5 ರಲ್ಲಿ ಸೋಲನ್ನು ಕಂಡಿರುವ ಆರ್ ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿದಿದೆ.

Leave a Reply

Your email address will not be published.

Social Media Auto Publish Powered By : XYZScripts.com