ನಮಗೆ ಮುಸ್ಲೀಮರ ಮತಗಳು ಬೇಕಾಗಿಲ್ಲ : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌

ರಾಯಚೂರು : ರಾಜ್ಯದಲ್ಲಿ 40 ಅಭ್ಯರ್ಥಿಗಳನ್ನು ಶಿವಸೇನೆಯಿಂದ ಚುನಾವಣಾ ಕಣಕ್ಕೆ ಇಳಿಸಲಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 2-5 ಸ್ಥಾನಗಳನ್ನು ಶಿವಸೇನೆ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ.  ಬಿಜೆಪಿಯ ಡೋಂಘೀ ಹಿಂದುತ್ವದ ವಿರುದ್ಧ ನಮ್ಮ ಹೋರಾಟ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್’ನಿಂದ ಹಿಂದುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿವಸೇನೆಗೆ ಮುಸ್ಲಿಂರ ಮತಗಳು ಬೇಕಾಗಿಲ್ಲ. ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಇದ್ರೆ ನಮಗೆ ಮತ ಹಾಕಿ ಎಂದಿದ್ದಾರೆ.

 

ರಾಯಚೂರು ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳೇ ಇಲ್ಲ. ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಇಲ್ಲದ್ದಕ್ಕೆ ಬಾಡಿಗೆ ತರಲಾಗಿದೆ .
ಬಾಡಿಗೆ ಅಭ್ಯರ್ಥಿಯನ್ನು ತಂದು ಬಿಜೆಪಿ ಅಭ್ಯರ್ಥಿಯನ್ನಾಗಿಸಿದ್ದಾರೆ. ಜೆಡಿಎಸ್’ನಿಂದ ಬಿಜೆಪಿಯವರು ಬಾಡಿಗೆ ಅಭ್ಯರ್ಥಿಯನ್ನು ತಂದಿದ್ದಾರೆ. ಬಾಡಿಗೆ ಬಿಜೆಪಿ ಅಭ್ಯರ್ಥಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.ಐದು ವರ್ಷ ಶಾಸಕರಾಗಿದ್ದ ಡಾ.ಶಿವರಾಜ ಪಾಟೀಲ್ ಕೆಲಸ ಮಾಡಿಲ್ಲ. ಸೋಲಿನ ಭಯದಿಂದ ಬಿಜೆಪಿ ಸೇರಿ ಡಾ.ಶಿವರಾಜ ಪಾಟೀಲ್ ಟಿಕೆಟ್ ಪಡೆದಿದ್ದಾರೆ. ನಾನು 40 ವರ್ಷ ಹಿಂದುತ್ವಕ್ಕಾಗಿ ಜೀವನ ಮೀಸಲಿಟ್ಟಿದ್ದೇನೆ. ನನಗೆ ಬಿಜೆಪಿ ಟಿಕೆಟ್ ನೀಡದಿರುವುದು ಆ ಪಕ್ಷದ ಢೋಂಗಿತನ ತೋರಿಸುತ್ತದೆಶಿವಸೇನೆ, ಪಕ್ಷೇತರ ಅಥವಾ ನೋಟಾ ಓಟು ಚಲಾವಣೆ ಮಾಡಿ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com