ಮೈಸೂರಲ್ಲಿ ಮುಸ್ಲೀಮರು ನನ್ನನ್ನು ನಂಬಿ ಹೇಗೆ ಕಾಂಗ್ರೆಸ್‌ ಸೇರ್ತಿದ್ದಾರೆ ಅಂತ ನೋಡಿ : ಜಮೀರ್ ಅಹ್ಮದ್‌

ರಾಮನಗರ : ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ರಾಮನಗರದ ಬಿಡದಿಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಜಮೀರ್ ಅಹ್ಮದ್‌, ನನ್ನ ಬಗ್ಗೆ ಮಾತನಾಡ್ಲಿಕ್ಕೆ ಆ ಕುಮಾರಸ್ವಾಮಿ ಯಾರು ?. ನಾನು ಚನ್ನಪಟ್ಟಣಕ್ಕೆ, ರಾಮನಗರಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನರನ್ನು ಸೇರಿಸಿರೋದು ಯಾರು ?. ಎಂದು ಪ್ರಶ್ನಿಸಿದ್ದಾರೆ.

22 ಲಕ್ಷ ಹಣ ಹಂಚಿ ಕುಮಾರಸ್ವಾಮಿ‌ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ. ನಾನು ಬಂದಾಗ ತಡರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ರು. ಕುಮಾರಸ್ವಾಮಿ ಹಣ‌ಕೊಟ್ರು ಸೇರಿದ್ದು 200 ಜನ ಮಾತ್ರ. ಕುಮಾರಸ್ವಾಮಿ‌ ಹಣಕೊಟ್ಟು ಜನ ಸೇರಿಸ್ತಾನೆ, ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ 52 ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ಒಮ್ಮೆ ನೋಡಿ ಎಂದಿದ್ದಾರೆ.

ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ. ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವ್ನು ಯಾರು. ಮುಸ್ಲಿಂರನ್ನ ಜರಿದು ಈಗ ನಾನು ಮಾತನಾಡಿಲ್ಲ ಅಂತಾನೆ. ಅವ್ರದು ಹಿಟ್ ಅಂಡ್ ರನ್ ಕೇಸ್. ನಾನು ಹೇಳಿದ್ದು ಅಂತ ಯಾವುದನ್ನು ಒಪ್ಪಿಕೊಂಡಿದ್ದಾನೆ. ಹೇಳೋದನ್ನ ಹೇಳಿ ನಂತ್ರ ನಾನು ಹೇಳೇ ಇಲ್ಲ ಅಂತಾನೆ. ಅಮಿತ್ ಭೇಟಿ ವಿಚಾರ ಕೇಳಿದ್ರೆ ಯಾಕೆ ಕುಮಾರಸ್ವಾಮಿ ಬ್ಯಾ ಬ್ಯಾ ಅಂತಿಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com