ನಾರದ ಮುನಿಯನ್ನು ಗೂಗಲ್‌ಗೆ ಹೋಲಿಸಿದ ಗುಜರಾತ್ ಸಿಎಂ ವಿಜಯ್ ರೂಪಾನಿ !

ಅಹಮದಾಬಾದ್‌ : ಮಹಾಭಾರತದ ಕಾಲದಲ್ಲೂ ಇಂಟರ್‌ನೆಟ್ ಇತ್ತು ಎಂದು ಇತ್ತೀಚೆಗಷ್ಟೇ ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ ಹೇಳಿಕೆ ನೀಡಿ ನಗೆಪಾಟಲಿಗೀಡಾದ ಬೆನ್ನಲ್ಲೇ ಗುಜರಾತ್ ಸಿಎಂ ವಿಜಯ್‌ ರೂಪಾನಿ ಸಹ ಅಂತಹದ್ದೇ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಸೋಮವಾರ ಪತ್ರಕರ್ತರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರೂಪಾನಿ, ಪತ್ರಕರ್ತರು ನಾರದನಂತೆ ಸುದ್ದಿಯನ್ನು ಮಾತ್ರ ನೀಡಬೇಕೇ ಹೊರತು ಅಭಿಪ್ರಾಯಗಳನ್ನಲ್ಲ. ನಾರದ ದೇವತೆಗಳು ಹಾಗೂ ರಾಕ್ಷಸರ ಜೊತೆ ಮಾಹಿತಿ ಹಂಚಿಕೊಂಡರೂ ಮಾನವರಿಗೆ ಒಳಿತಾಗುವಂತೆ ಮಾಡುತ್ತಿದ್ದರು  ಎಂದಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ನಾರದ ಮಹರ್ಷಿ ಗೂಗಲ್‌ ಇದ್ದಂತೆ. ಜಗತ್ತಿನಲ್ಲಿ ನಡೆಯುವುದೆಲ್ಲ ಅಂದು ನಾರದನಿಗೆ ಗೊತ್ತಿತ್ತು. ಇಂದು ಆ ಕೆಲಸವನ್ನು ಗೂಗಲ್ ಮಾಡುತ್ತಿದೆ. ನಿಜವಾದ ಪತ್ರಕರ್ತ ನಾರದ ಮುನಿ ಎಂದಿದ್ದಾರೆ.

ಆದ್ದರಿಂದಲೇ ನಾರದರನ್ನು ಋಷಿ ಎಂದು ಪರಿಗಣಿಸಲಾಗುತ್ತದೆ. ನಾರದರನ್ನು ಕಲಹ ಪ್ರಿಯ ಎಂದು ಬಿಂಬಿಸಲಾಗಿದೆ. ಆದರೆ ನಾರದರು ನಿಜವಾಗಿ ಜನಕಲ್ಯಾಣಕ್ಕಾಗಿ ಮಾಹಿತಿಯನ್ನು ಬಳಸುತ್ತಿದ್ದರು.  ಆದರೆ ಅವರನ್ನು ಸರಿಯಾಗಿ ಬಿಂಬಿಸಿಲ್ಲ ಅಷ್ಟೇ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com